ನವದೆಹಲಿ: ಮೀಶೊ ತನ್ನ ಉದ್ಯೋಗಿಗಳಿಗಾಗಿ ‘ಮೀಕೇರ್’ ಎಂಬ ಹೊಸ ರಜೆ ನೀತಿಯನ್ನು ಪ್ರಾರಂಭಿಸಿದೆ. ಈ ನೀತಿಯ ಅಡಿಯಲ್ಲಿ ಉದ್ಯೋಗಿಗಳು ಒಂದು ವರ್ಷ ಅಥವಾ 365 ದಿನಗಳ ವೇತನ ಸಹಿತ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಉದ್ಯೋಗಿಗಳು ಇಲ್ಲವೇ ಅವರ ಕುಟುಂಬದವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾದ ವೇಳೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಇದಲ್ಲದೇ ಉದ್ಯೋಗಿಗಳಿಗೆ ಕಲೆ, ಕ್ರೀಡೆ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಬಯಸಿದರೆ ಅವರ ಗುರಿ ಈಡೇರಿಕೆಗೆ ರಜೆ ಸೌಲಭ್ಯ ಪಡೆದುಕೊಳ್ಳಬಹುದು. ಉದ್ಯೋಗಿ ಅನಾರೋಗ್ಯಕ್ಕೆ ಒಳಗಾದರೆ ಪೂರ್ಣ ವೇತನ, ಕುಟುಂಬ ಸದಸ್ಯರಿಗೆ ಅನಾರೋಗ್ಯ ಉಂಟಾಗಿ ರಜೆ ಪಡೆದರೆ ಶೇಕಡ 25 ರಷ್ಟು ವೇತನ ಸಿಗಲಿದೆ.
ವೈದ್ಯಕೀಯ ಮತ್ತು ವೈದ್ಯಕೀಯೇತರ ಕಾರಣಗಳಿಂದ ರಜೆ ತೆಗೆದುಕೊಳ್ಳಬಹುದು. ಹಿಂದಿರುಗಿದ ನಂತರ, ಅವರು ಹಿಂದೆ ಹೊಂದಿದ್ದ ಅದೇ ಹುದ್ದೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಸ್ವಯಂ ಅನಾರೋಗ್ಯದ ಕಾರಣ ರಜೆ ತೆಗೆದುಕೊಂಡರೆ, ಕಂಪನಿಯಿಂದ ಪೂರ್ಣ ಸಂಬಳ ನೀಡಲಾಗುವುದು.
ಕುಟುಂಬದ ಸದಸ್ಯರ ಅನಾರೋಗ್ಯದ ಕಾರಣ ರಜೆ ತೆಗೆದುಕೊಂಡರೆ, ಅವರು ಮೂರು ತಿಂಗಳ ಅವಧಿಗೆ 25 ಪ್ರತಿಶತ ಪರಿಹಾರವನ್ನು ಪಡೆಯುತ್ತಾರೆ.
ಭವಿಷ್ಯ ನಿಧಿ, ವಿಮೆ ಮುಂತಾದ ಪ್ರಯೋಜನಗಳನ್ನು ಒದಗಿಸಲಾಗುವುದು.
ವೈದ್ಯಕೀಯೇತರ ಉದ್ದೇಶಗಳಿಗಾಗಿ ರಜೆ ತೆಗೆದುಕೊಂಡರೆ, ಯಾವುದೇ ಸಂಬಳ ನೀಡಲಾಗುವುದಿಲ್ಲ.