alex Certify ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಏಪ್ರಿಲ್​​ನಿಂದ ದುಬಾರಿಯಾಗಲಿದೆ ಔಷಧಿಗಳ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಏಪ್ರಿಲ್​​ನಿಂದ ದುಬಾರಿಯಾಗಲಿದೆ ಔಷಧಿಗಳ ಬೆಲೆ

ನೋವು ನಿವಾರಕ, ಆಂಟಿಇಫೆಕ್ಟಿವ್​, ಕಾರ್ಡಿಯಾಕ್​ ಹಾಗೂ ಆಂಟಿಬಯೋಟಿಕ್ಸ್ ಸಹಿತ ಅವಶ್ಯಕ ಔಷಧಿಗಳ ಬೆಲೆ ಏಪ್ರಿಲ್​ ತಿಂಗಳಿನಿಂದ ಏರಿಕೆಯಾಗಲಿದೆ.  ಸರ್ಕಾರವು ಔಷಧಿ ತಯಾರಕರ ವಾರ್ಷಿಕ ಹೋಲ್​ಸೇಲ್​​ ದರ ಇಂಡೆಕ್ಸ್ ಆಧಾರದಲ್ಲಿ ಔಷಧದ ಬೆಲೆಗಳಲ್ಲಿ ಬದಲಾವಣೆ ಮಾಡಿದೆ. ಡ್ರಗ್​​ ಪ್ರೈಸ್​ ರೆಗ್ಯೂಲೇಟರ್​, ನ್ಯಾಷನಲ್​ ಫಾರ್ಮಾಸ್ಯೂಟಿಕಲ್​​ ಪ್ರೈಸಿಂಗ್​ ಅಥಾರಿಟಿ ಶುಕ್ರವಾರ ಈ ವಿಚಾರವಾಗಿ ಮಾತನಾಡಿದ್ದು‌, ಸರ್ಕಾರದ ಕಡೆಯಿಂದ 2020ಕ್ಕೆ ಡಬ್ಲುಪಿಐನಲ್ಲಿ 0.5 ಪ್ರತಿಶತ ವಾರ್ಷಿಕ ಚೇಂಜ್​ ನೋಟಿಫೈ ಮಾಡಲಾಗಿದೆ.

ಆನ್ಯುವಲ್​ ಡಬ್ಲುಪಿಐನ ಶೆಡ್ಯೂಲ್​ ಔಷಧಿಗಳ ಬೆಲೆ ಮೇಲೆ ಪ್ರತಿ ವರ್ಷ ಏರಿಕೆ ಮಾಡಲಾಗುತ್ತೆ. ಸೂತ್ರಗಳ ಅನುಸಾರ ಕಂಪನಿಗಳು ಈ ಏರಿಕೆಯಿಂದ ಚಿಂತಿತರಾಗಿದ್ದಾರೆ.ಅವರ ಪ್ರಕಾರ ಮ್ಯಾನುಫ್ಯಾಕ್ಚರಿಂಗ್​​ ಕಾಸ್ಟ್​ನಲ್ಲಿ ಹೆಚ್ಚು ಕಡಿಮೆ 15-20 ಪ್ರತಿಶತ ಏರಿಕೆಯಾಗಿದೆ. ಹಾಗೂ ಫಾರ್ಮೋ ಇಂಡಸ್ಟ್ರಿ ಬೆಲೆಗಳ ಮೇಲೆ 20 ಪ್ರತಿಶತ ಏರಿಕೆ ಮಾಡುವ ಬಗ್ಗೆ ಯೋಜನೆ ತಯಾರಾಗ್ತಿದೆ. ಆದರೆ ಎಷ್ಟು ಏರಿಕೆ ಮಾಡಲಾಗುತ್ತೆ ಅನ್ನೋದರ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.

ಫಾರ್ಮಾ ಇಂಡಸ್ಟ್ರಿ ಎಕ್ಸಿಕ್ಯೂಟಿವ್​​ ಪ್ರಕಾರ ಕೊರೊನಾ ಸಾಂಕ್ರಾಮಿಕದಿಂದಾಗಿ ಇಂಡಸ್ಟ್ರಿಯ ಕಚ್ಛಾ ವಸ್ತು ಹಾಗೂ ಪ್ಯಾಕೇಜಿಂಗ್​ ಮಟೀರಿಯಲ್​ ಬೆಲೆಗಳು ಏರಿಕೆ ಕಂಡಿದ್ದು ಇದೇ ಬೆಲೆ ಏರಿಕೆಗೆ ಕಾರಣವಾಗಿದೆ.

ಕಾರ್ಡಿಯೋ ವಸ್ಕುಲರ್​, ಡಯಾಬಿಟೀಸ್​, ಆಂಟಿಬಯೋಟಿಕ್ಸ್, ಆಂಟಿ ಇನ್​​ಫೆಕ್ಟಿವ್​ ಹಾಗೂ ವಿಟಾಮಿನ್​​ ಮಾತ್ರೆಗಳ ತಯಾರಿಕೆಗಾಗಿ ಚೀನಾ ಮೂಲದ ಕಚ್ಚಾ ವಸ್ತುಗಳನ್ನ ಹೆಚ್ಚಾಗಿ ಬಳಕೆ ಮಾಡಲಾಗುತ್ತೆ. ಕೊರೊನಾದಿಂದಾಗಿ ಚೀನಾ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತೊಡಕುಂಟಾಗಿದ್ದು ಇದರಿಂದ ಕೂಡ ಮಾತ್ರೆಗಳ ಬೆಲೆ ಏರಿಕೆ ಕಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...