
ನವದೆಹಲಿ: ಜೂನ್ 12 ರಂದು ಸರಕು ಮತ್ತು ಸೇವಾ ತೆರಿಗೆ(GST) ಮಂಡಳಿ ಸಭೆ ನಡೆಯಲಿದ್ದು, ಕೊರೋನಾ ವೈದ್ಯೋಕರಣ, ಕಪ್ಪು ಶಿಲೀಂಧ್ರ ಔಷಧಗಳ ಮೇಲಿನ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮೇ 28 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆರಿಗೆ ಕಡಿತ ಮಾಡಲು ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.
ಕೊರೋನಾ ಅಗತ್ಯ ವಸ್ತುಗಳಾದ ಪಿಪಿಇ ಕಿಟ್, ಮಾಸ್ಕ್, ಕೊರೊನಾ ಲಸಿಕೆ, ಔಷಧ, ವೈದ್ಯಕೀಯ ಉಪಕರಣ, ಕಪ್ಪು ಶಿಲೀಂಧ್ರ ಔಷಧಗಳ ಮೇಲಿನ ತೆರಿಗೆ ಬಗ್ಗೆ ಈ ಸಮಿತಿ ವರದಿ ನೀಡಿದ್ದು, ನಾಳೆ ನಡೆಯಲಿರುವ ಜಿಎಸ್ಟಿ ಮಂಡಲಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.