ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಮೆಕ್ ಡೊನಾಲ್ಡ್ಸ್ ಇಂಡಿಯಾ ಸುಮಾರು 5,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ.
ಮುಂದಿನ ಮೂರು ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ರೆಸ್ಟೋರೆಂಟ್ ಗಳ ಸಂಖ್ಯೆ 300ಕ್ಕಿಂತ ಹೆಚ್ಚಿಸಲಿದ್ದು, ಔಟ್ ಲೆಟ್ ಗಳನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ಮೆಕ್ ಡೊನಾಲ್ಡ್ ನ ಭಾರತದ ಅತಿದೊಡ್ಡ ರೆಸ್ಟೋರೆಂಟ್ ಅನ್ನು ಗುವಾಹಟಿಯಲ್ಲಿ ಸ್ಥಾಪಿಸಲಾಗಿದೆ, ಇದು 6,700 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಒಂದೇ ಸಮಯದಲ್ಲಿ 220 ಜನರ ಸಾಮರ್ಥ್ಯ ಹೊಂದಿದೆ.
ಮೆಕ್ ಡೊನಾಲ್ಡ್ಸ್ ಇಂಡಿಯಾ (ಉತ್ತರ ಮತ್ತು ಪೂರ್ವ) ವ್ಯವಸ್ಥಾಪಕ ನಿರ್ದೇಶಕ ರಾಜೀವ್ ರಂಜನ್, ಕಂಪನಿಯು ತ್ವರಿತ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ಅದರ ಅಡಿಯಲ್ಲಿ ರಾಜ್ಯಗಳಾದ್ಯಂತ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಲು ಗಮನಹರಿಸಿದೆ ಎಂದು ಹೇಳಿದ್ದಾರೆ.