ಏಪ್ರಿಲ್ 1ರಿಂದ ಆರಂಭಗೊಳ್ಳಲಿರುವ 2021-22ರ ವಿತ್ತೀಯ ವರ್ಷದಲ್ಲಿ ಮಾರುತಿ ಸುಜುಕಿ ಲಿ ತನ್ನ ವಿವಿಧ ಮಾಡೆಲ್‌ಗಳ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಿದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುತ್ತಿರುವ ಕಾರಣ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಕಾರು ಉತ್ಪಾದಕ ಸಂಸ್ಥೆ ತಿಳಿಸಿದೆ.
ಕಳೆದ ಮಾರ್ಚ್‌ನಲ್ಲಿ ಕೋವಿಡ್-19 ಸಾಂಕ್ರಮಿಕ ಕಾರಣದ ಲಾಕ್‌ಡೌನ್‌ನಿಂದಾಗಿ ಬೇಡಿಕೆಯಲ್ಲಿ ಕುಸಿತ ಕಂಡ ಕಾರಣ ಬಿಡಿಭಾಗಗಳು ಸೇರಿದಂತೆ ಉತ್ಪಾದನೆಗೆ ಬೇಕಾಗುವ ಅಂಶಗಳ ಪೂರೈಕೆ ವೆಚ್ಚ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಕಾರುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ಉತ್ಪಾದಕರು ಉಚ್ಛರಿಸುತ್ತಲೇ ಬಂದಿದ್ದರು.
ಮಹಿಂದ್ರ & ಮಹಿಂದ್ರಾ ಸಹ ಇದೇ ಜನವರಿಯಲ್ಲಿ ತನ್ನ ಕಾರುಗಳ ಬೆಲೆಯಲ್ಲಿ 1.9 ಪ್ರತಿಶತದಷ್ಟು ಬೆಲೆ ಏರಿಕೆ ಮಾಡಿದರೆ, ಟಾಟಾ ಮೋಟರ್ಸ್ ತನ್ನ ವಾಹನಗಳ ಬೆಲೆಯನ್ನು 26,000 ರೂ.ಗಳಷ್ಟು ಹೆಚ್ಚಿಸಿತ್ತು.
ಇದೀಗ ಮಾರುತಿ ಸಹ ತನ್ನ ಕೆಲ ಕಾರುಗಳ ಬೆಲೆಯನ್ನು 34,000 ರೂ.ಗಳವರೆಗೂ ಏರಿಕೆ ಮಾಡುವುದಾಗಿ ಘೋಷಿಸಿದೆ.