alex Certify ಕಾರು ಖರೀದಿಸಲು ಬಯಸುವ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿಸಲು ಬಯಸುವ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಝುಕಿಯಿಂದ ಸರ್ಕಾರಿ ನೌಕರರಿಗೆ ವಿಶೇಷ ಆಫರ್‌ಗಳ ಘೋಷಣೆ ಆಗಿದೆ. ಇದೇ ಹಬ್ಬದ ಮಾಸದಲ್ಲಿ ತನ್ನೆಲ್ಲಾ ಮಾಡೆಲ್‌ನ ಕಾರುಗಳಿಗೆ 11,000 ರೂ.ಗಳಷ್ಟು ವಿಶೇಷ ಆಫರ್‌ಗಳನ್ನು ಕೊಡುತ್ತಿದೆ ಮಾರುತಿ ಸುಝುಕಿ.

ರಜೆ ಅವಧಿಯಲ್ಲಿ ಪ್ರಯಾಣ ಮಾಡಲು ವಿಶೇಷ ವಿನಾಯಿತಿ ಕೊಡುವ ಸಂಬಂಧ (LTC) ವಿಶೇಷ ವೋಚರ್‌ ಒಂದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಘೋಷಣೆ ಮಾಡಿದ ಬಳಿಕ ತನ್ನ ಕಾರುಗಳಿಗೆ ಇರುವ ಡಿಮ್ಯಾಂಡ್‌ ಅನ್ನು ಹೆಚ್ಚಿಸಲು ಮಾರುತಿ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು ಒಂದು ಕೋಟಿಗೂ ಅಧಿಕ ಸರ್ಕಾರಿ ಉದ್ಯೋಗಿಗಳು ಕಾರು ಮಾರುಕಟ್ಟೆಯ ಗ್ರಾಹಕರ ದೊಡ್ಡದೊಂದು ವರ್ಗವಾಗಿದ್ದಾರೆ. ಈ ಮಾಹಿತಿಯನ್ನು ಇಟ್ಟುಕೊಂಡೇ, ಸರ್ಕಾರಿ ನೌಕರರನ್ನು ಟಾರ್ಗೆಟ್ ಮಾಡಿ ಈ ‌ ಘೋಷಣೆ ಮಾಡಿರುವುದಾಗಿ ಮಾರುತಿ ಸುಝುಕಿ ಇಂಡಿಯಾದ ಕಾರ್ಯನಿವಾರ್ದಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...