ನವದೆಹಲಿ: ಮಾರುತಿ ಸುಜುಕಿ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಮತ್ತು ಏಪ್ರಿಲ್ 2023 ರಿಂದ ಕಟ್ಟುನಿಟ್ಟಾದ ಮಾನದಂಡಗಳಿಗೆ ಅನುಗುಣವಾಗಿ ಮಾದರಿ ಶ್ರೇಣಿಯನ್ನು ನವೀಕರಿಸಲು ಮಾರುತಿ ಸುಜುಕಿ ಇಂಡಿಯಾ ಮುಂದಿನ ತಿಂಗಳಿನಿಂದ ತನ್ನ ವಾಹನಗಳ ಬೆಲೆಗಳನ್ನು ‘ಗಣನೀಯವಾಗಿ’ ಹೆಚ್ಚಿಸಲಿದೆ.
ದೇಶದ ಅತಿದೊಡ್ಡ ಕಾರು ತಯಾರಕ ಕಂಫನಿಯಾಗಿರುವ ಮಾರುತಿ ಸುಜುಕಿ ಒಟ್ಟಾರೆ ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಅಗತ್ಯತೆಗಳಿಂದ ಹೆಚ್ಚಿದ ವೆಚ್ಚದ ಒತ್ತಡಕ್ಕೆ ಸಾಕ್ಷಿಯಾಗಿದೆ. ವಾಹನ ತಯಾರಕರು ವೆಚ್ಚ ಕಡಿಮೆ ಮಾಡಲು ಮತ್ತು ಹೆಚ್ಚಳ ಭಾಗಶಃ ಸರಿದೂಗಿಸಲು ಬೆಲೆ ಹೆಚ್ಚಳದ ಮೂಲಕ ಕೆಲವು ಪರಿಣಾಮ ರವಾನಿಸುವುದು ಅನಿವಾರ್ಯವಾಗಿದೆ. ಕಂಪನಿಯು ಜನವರಿ 2023 ರಲ್ಲಿ ಬೆಲೆ ಹೆಚ್ಚಳವನ್ನು ಯೋಜಿಸಿದೆ, ಇದು ಮಾದರಿಗಳಾದ್ಯಂತ ಬದಲಾಗುತ್ತದೆ ಎಂದು ಹೇಳಲಾಗಿದೆ.