ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(ಸಿಸಿಐ) ಸೋಮವಾರ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ 200 ಕೋಟಿ ರೂ. ದಂಡ ವಿಧಿಸಿದೆ. ರಿಯಾಯಿತಿ ನಿಯಂತ್ರಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಯಾಣಿಕರ ವಾಹನ ವಿಭಾಗದಲ್ಲಿ ಬೆಲೆ ನಿರ್ವಹಣೆಯ ಸ್ಪರ್ಧಾತ್ಮಕ ವಿರೋಧಿ ನಡವಳಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸ್ಪರ್ಧಾತ್ಮಕ ಆಯೋಗವು(ಸಿಸಿಐ) ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್‌ಐಎಲ್) ವಿರುದ್ಧ ರಿಯಾಯಿತಿ ನಿಯಂತ್ರಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಯಾಣಿಕರ ವಾಹನ ವಿಭಾಗದಲ್ಲಿ ಮರು ಮಾರಾಟ ಬೆಲೆ ನಿರ್ವಹಣೆಯ(ಆರ್‌ಪಿಎಂ) ಸ್ಪರ್ಧಾತ್ಮಕ ವಿರೋಧಿ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಅಂತಿಮ ಆದೇಶ ನೀಡಿದೆ.
ಎಂಎಸ್‌ಐಎಲ್ ತನ್ನ ವಿತರಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು, ಆ ಮೂಲಕ ವಿತರಕರು ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡುವುದನ್ನು ನಿರ್ಬಂಧಿಸಲಾಗಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಂಪನಿಯು ರಿಯಾಯಿತಿ ನಿಯಂತ್ರಣ ನೀತಿಯನ್ನು ಹೊಂದಿತ್ತು. ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಇಚ್ಛಿಸುವ ವಿತರಕರು ಕಂಪನಿಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದಿತ್ತು.
ಸಿಸಿಐ ಪ್ರಕಾರ, ಯಾವುದೇ ಡೀಲರ್ ಪಾಲಿಸಿಯನ್ನು ಉಲ್ಲಂಘಿಸಿದರೆ, ಡೀಲರ್‌ಶಿಪ್ ಮೇಲೆ ಮಾತ್ರವಲ್ಲದೇ ನೇರ ಮಾರಾಟ ಕಾರ್ಯನಿರ್ವಾಹಕ, ಪ್ರಾದೇಶಿಕ ವ್ಯವಸ್ಥಾಪಕ ಮತ್ತು ಶೋ ರೂಂ ಮ್ಯಾನೇಜರ್ ಸೇರಿದಂತೆ ವೈಯಕ್ತಿಕ ವ್ಯಕ್ತಿಗಳ ಮೇಲೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು.
ರಿಯಾಯಿತಿ ನಿಯಂತ್ರಣ ನೀತಿಯನ್ನು ಜಾರಿಗೊಳಿಸಲು, ಗ್ರಾಹಕರಿಗೆ ಯಾವುದೇ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗಿದೆಯೇ ಎಂದು ಕಂಡುಹಿಡಿಯಲು ಎಂಎಸ್‌ಐಎಲ್ ಡೀಲರ್‌ಶಿಪ್‌ಗಳಿಗೆ ಗ್ರಾಹಕರಂತೆ ಪೋಸ್ ನೀಡುತ್ತಿದ್ದ ‘ಮಿಸ್ಟರಿ ಶಾಪಿಂಗ್ ಏಜೆನ್ಸೀಸ್'(ಎಂಎಸ್‌ಎ) ಗಳನ್ನು ನೇಮಿಸಲಾಗಿದೆ ಎಂದು ವಾಚ್ ಡಾಗ್ ಹೇಳಿದೆ.
ಕೊಡುಗೆ ನೀಡುವುದು ಕಂಡು ಬಂದರೆ, MSA ನಿಂದ MSIL ನಿರ್ವಹಣೆಗೆ ಪುರಾವೆ(ಆಡಿಯೋ/ ವಿಡಿಯೋ ರೆಕಾರ್ಡಿಂಗ್) ಜೊತೆಗೆ ವರದಿ ಮಾಡುತ್ತದೆ, ಅವರು ತಪ್ಪಾದ ಡೀಲರ್ ಶಿಪ್‌ಗೆ ‘ಮಿಸ್ಟರಿ ಶಾಪಿಂಗ್ ಆಡಿಟ್ ರಿಪೋರ್ಟ್’ ಜೊತೆಗೆ ಇ-ಮೇಲ್ ಕಳುಹಿಸುತ್ತಾರೆ, ಮತ್ತು ಸ್ಪಷ್ಟೀಕರಣವನ್ನು ಕೇಳುತ್ತಾರೆ ಎಂದು ಹೇಳಲಾಗಿದೆ.
ಇದಲ್ಲದೆ, ಸಂಬಂಧಿತ ಡೀಲರ್ ನೀಡಿದ ಸ್ಪಷ್ಟೀಕರಣವು ತೃಪ್ತಿಕರವಾಗಿಲ್ಲದಿದ್ದರೆ, ಕೆಲವು ಸಂದರ್ಭಗಳಲ್ಲಿ ಪೂರೈಕೆ ನಿಲ್ಲಿಸುವ ಬೆದರಿಕೆಯಿಂದ ಡೀಲರ್‌ಶಿಪ್ ಮತ್ತು ಅದರ ಉದ್ಯೋಗಿಗಳಿಗೆ ದಂಡ ವಿಧಿಸಲಾಗುವುದು ಎಂದು ಸಿಸಿಐ ಗಮನಿಸಿದೆ.
ಎಂಎಸ್‌ಐಎಲ್ ಡೀಲರ್ ಶಿಪ್‌ಗೆ ಪೆನಾಲ್ಟಿ ಜಮಾ ಮಾಡಬೇಕಾಗಿತ್ತು ಮತ್ತು ಪೆನಾಲ್ಟಿ ಮೊತ್ತದ ಬಳಕೆಯನ್ನೂ ಎಂಎಸ್‌ಐಎಲ್‌ನ ನಿರ್ದೇಶನದಂತೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಿಸಿಐ ಕಾರು ತಯಾರಕರು ತನ್ನ ಡೀಲರ್‌ಗಳ ಮೇಲೆ ರಿಯಾಯಿತಿ ನಿಯಂತ್ರಣ ನೀತಿಯನ್ನು ಹೇರುವುದಲ್ಲದೆ, ಎಂಎಸ್‌ಎ ಮೂಲಕ ಡೀಲರ್‌ಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ, ದಂಡ ವಿಧಿಸುವ ಮೂಲಕ ಮತ್ತು ಪೂರೈಕೆ ನಿಲ್ಲಿಸುವ, ದಂಡ ವಸೂಲಿ ಮಾಡುವಂತಹ ಕಠಿಣ ಕ್ರಮಕ್ಕೆ ಬೆದರಿಕೆಯೊಡ್ಡುವ ಮೂಲಕ ನಿಗಾವಹಿಸಲಾಗಿದೆ ಎನ್ನಲಾಗಿದೆ. ಇಂತಹ ಚಟುವಟಿಕೆಗಳು ಸ್ಪರ್ಧೆಯ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದನ್ನೂ ಕೂಡ ಈ ಸಂದರ್ಭದಲ್ಲಿ ಗಮನಿಸಲಾಗಿದೆ.