ದೇಶದ ಅತಿದೊಡ್ಡ ಕಾರು ನಿರ್ಮಾತೃ ಸಂಸ್ಥೆ ಮಾರುತಿ ಸುಜುಕಿ, ಆಮ್ಲಜನಕ ಪೂರೈಕೆಗಾಗಿ ಹರಿಯಾಣದಲ್ಲಿ ತನ್ನ ಕಾರು ನಿರ್ಮಾಣ ಯೂನಿಟ್ಗಳನ್ನ ಬಂದ್ ಮಾಡಿದೆ. ಇದು ಮಾತ್ರವಲ್ಲದೇ ಗುಜರಾತ್ನಲ್ಲಿಯೂ ಕಾರು ನಿರ್ಮಾಣ ಯುನಿಟ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.
ಕಾರು ನಿರ್ಮಾಣದ ಭಾಗವಾಗಿ ಮಾರುತಿ ಸುಜುಕಿ ಕೊಂಚ ಪ್ರಮಾಣದಲ್ಲಿ ಆಮ್ಲಜನಕವನ್ನ ಬಳಕೆ ಮಾಡಿಕೊಳ್ಳುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲಿ ಲಭ್ಯವಿರುವ ಎಲ್ಲಾ ಕೃತಕ ಆಮ್ಲಜನಕವು ಜೀವ ಉಳಿಸುವ ಕಾರ್ಯಕ್ಕೆ ಮಾತ್ರ ಬಳಕೆ ಆಗಬೇಕು. ಹೀಗಾಗಿ ನಮ್ಮ ಎರಡು ಯುನಿಟ್ಗಳನ್ನ ಬಂದ್ ಮಾಡ್ತಿರೋದಾಗಿ ಕಂಪನಿ ಪ್ರಕಟಣೆ ಹೊರಡಿಸಿದೆ.
ಕಾಂಟ್ಯಾಕ್ಟ್ ಲೆನ್ಸ್ ತೆಗೆಯಲು ಅತ್ಯಂತ ಸುಲಭ ವಿಧಾನ ಪರಿಚಯಿಸಿದ ಯುವತಿ….!
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾದಿಂದ 3293 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ದೇಶದಲ್ಲಿ ಒಟ್ಟು ಸೋಂಕಿತರಿಗೆ 1.79 ಕೋಟಿ ಗಡಿ ದಾಟಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಆಮ್ಲಜನಕ ಹಾಗೂ ಮೆಡಿಸಿನ್ಗೆ ಅಭಾವ ಉಂಟಾಗಿದೆ.