
ಹೊಸ ಕಾರು ಖರೀದಿಸಬೇಕು ಎಂದು ಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ಮುಂದಿನ ತಿಂಗಳಿನಿಂದ ಬೆಲೆ ಹೆಚ್ಚಳ ಮಾಡಲಿದೆ.
ವಿವಿಧ ಇನ್ಪುಟ್ ವೆಚ್ಚಗಳ ಏರಿಕೆಯಿಂದಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಏಪ್ರಿಲ್ನಿಂದ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ. ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳವಾಗಿರುವುದು ಕಾರ್ ತಯಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನು ಏಪ್ರಿಲ್ ನಿಂದ ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಮುಂದಾಗಿದೆ ಎನ್ನಲಾಗಿದೆ.