ಭಾರತದ ದೈತ್ಯ ಆಟೋ ಮೇಕರ್ ಮಾರುತಿ ಸುಜುಕಿ ಇಂಡಿಯಾ ಸೋಮವಾರದಿಂದ ತನ್ನ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ದೆಹಲಿಯ ಶೋರೂಮ್ಗಳಲ್ಲಿ ಮಾರುತಿ ಸುಜುಕಿ ವಾಹನಗಳ ಬೆಲೆ 34 ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.
ವಾಹನಗಳ ಬಿಡಿ ಭಾಗಗಳ ಬೆಲೆ ಏರಿಕೆಯಾಗಿರೋದ್ರ ಹಿನ್ನೆಲೆ ಮಾರುತಿ ಸುಜುಕಿ ವಾಹನಗಳ ಬೆಲೆಯನ್ನ ಏರಿಕೆ ಮಾಡಿದೆ. ಮಾರುತಿ ಸುಜುಕಿ ಮಾತ್ರವಲ್ಲದೇ ದೇಶದಲ್ಲಿ ಇತರೆ ಕಾರು ತಯಾರಕ ಕಂಪನಿಗಳೂ ಸಹ ತಮ್ಮ ವಾಹನಗಳ ದರವನ್ನ ಈ ವರ್ಷದಿಂದ ಏರಿಕೆ ಮಾಡಿವೆ.
ಮಾರುತಿ ಸುಜುಕಿ ಆಲ್ಟೋ ಕಾರುಗಳ ಬೆಲೆಯಲ್ಲಿ 9 ಸಾವಿರ ರೂಪಾಯಿ, ಎಸ್ಪ್ರೆಸೋ ಬೆಲೆಯಲ್ಲಿ 7 ಸಾವಿರ ಹಾಗೂ ಬಲೆನೋ ಕಾರುಗಳ ಬೆಲೆಯಲ್ಲಿ 19,400 ರೂಪಾಯಿಗಳವರೆಗೆ ಏರಿಕೆ ಮಾಡಿದೆ. ಅದೇ ರೀತಿ ವ್ಯಾಗನಾರ್ 2500ರಿಂದ 18,200ರೂಪಾಯಿ, ಬ್ರೀಜಾ ಕಾರಿಗೆ 10 ಸಾವಿರ ರೂಪಾಯಿ ಏರಿಕೆ ಮಾಡಲಾಗಿದೆ. ಇದೇ ರೀತಿ ಇನ್ನೂ ಅನೇಕ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.