ನವದೆಹಲಿ: ಮಾರುತಿ ಸುಜುಕಿ ಇಂಡಿಯಾ, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 1.76 ಲಕ್ಷ ಯುನಿಟ್‌ಗಳ ಮಾರಾಟವಾಗಿದೆ. ಹಿಂದಿನ ಮಾರಾಟದ ಸಂಖ್ಯೆಯನ್ನು ಗಮನಿಸಿದರೆ ಈ ಬಾರಿ ಮಾರಾಟ ಎರಡು ಪಟ್ಟು ಹೆಚ್ಚಾಗಿದ್ದು, ಇದೊಂದು ದಾಖಲೆಯಾಗಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಬಿಡುಗಡೆ ಮಾಡಿದ ಅಂಕಿಅಂಶಗಳ ಆಧಾರದ ಮೇಲೆ ಈಗ ಕಂಪೆನಿಯು 1.31 ಲಕ್ಷ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ ವಾಹನ ರಫ್ತಿನಲ್ಲಿ ಮುಂಚೂಣಿಯಲ್ಲಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ಪ್ರಯಾಣಿಕರ ವಾಹನ (ಪಿವಿ) ರಫ್ತು 1,60,590 ಯುನಿಟ್‌ಗಳಷ್ಟಿತ್ತು, ಕಳೆದ ವರ್ಷ ಇದೇ ಅವಧಿಯಲ್ಲಿ 1,57,551 ಯುನಿಟ್‌ಗಳಿಷ್ಟಿತ್ತು. ಇದಕ್ಕೆ ಹೋಲಿಕೆ ಮಾಡಿದರೆ, ಕಾರುಗಳ ಸಾಗಣೆಯು 97,300 ಯುನಿಟ್‌ಗಳಲ್ಲಿ 5 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ, ಆದರೆ ಯುಟಿಲಿಟಿ ವಾಹನ ರಫ್ತುಗಳು 16 ಪ್ರತಿಶತದಷ್ಟು ಏರಿಕೆಯಾಗಿ 63,016 ಯುನಿಟ್ ತಲುಪಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಅಂಕಿಅಂಶದಲ್ಲಿ ದಾಖಲಾಗಿದೆ.
ವ್ಯಾನ್‌ಗಳ ರಫ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 274 ಯುನಿಟ್‌ಗಳಿಗೆ ಇಳಿದಿದೆ, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 297 ಯುನಿಟ್‌ಗಳಷ್ಟು ದಾಖಲಾಗಿತ್ತು. ಹ್ಯುಂಡೈ ಮೋಟಾರ್ ಇಂಡಿಯಾ ಮತ್ತು ಕಿಯಾ ಇಂಡಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.