ದೇಶದ ಅತಿದೊಡ್ಡ ಕಾರ್ ತಯಾರಕ ಮಾರುತಿ ಸುಜುಕಿ ಇಂಡಿಯಾ(MSI) ಕಾರ್ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯ ಪರಿಣಾಮವನ್ನು ಭಾಗಶಃ ಸರಿದೂಗಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ 4.3% ವರೆಗೆ ಬೆಲೆಗಳನ್ನು ಹೆಚ್ಚಿಸಿದೆ ಎಂದು ಕಂಪನಿ ಹೇಳಿದೆ.
ಮಾಡೆಲ್ ಗಳ ಎಕ್ಸ್-ಶೋ ರೂಂ ಬೆಲೆಗಳಲ್ಲಿ(ದೆಹಲಿ) ಸರಾಸರಿ ಬೆಲೆ ಹೆಚ್ಚಳವು ಶೇ. 1.7 ರಷ್ಟು ಆಗಿದೆ. ಹೊಸ ಬೆಲೆಗಳು ಜನವರಿ 15, 2022 ರಿಂದ ಜಾರಿಗೆ ಬರುತ್ತವೆ ಎಂದು ಹೇಳಲಾಗಿದೆ. ವಿವಿಧ ಇನ್ ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯು ಮಾದರಿಗಳ ಬೆಲೆ ಬದಲಾವಣೆಯನ್ನು ಘೋಷಿಸಿದೆ.
ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯ ಅದರ ಮಾದರಿಗಳ ವರ್ಧಿತ ಬೆಲೆಗಳು ಶೇ. 0.1 ರಿಂದ ಶೇ. 4.3 ವ್ಯಾಪ್ತಿಯಲ್ಲಿವೆ. ಮಾರುತಿ ಸುಜುಕಿ ಇಂಡಿಯಾ ಆಲ್ಟೊದಿಂದ ಎಸ್-ಕ್ರಾಸ್ ವರೆಗೆ ಕ್ರಮವಾಗಿ 3.15 ಲಕ್ಷ ರೂ. ಮತ್ತು 12.56 ಲಕ್ಷ ರೂ. ಬೆಲೆಯ ಶ್ರೇಣಿಯ ಕಾರ್ ಗಳನ್ನು ಮಾರಾಟ ಮಾಡುತ್ತದೆ.
ಆಟೋ ಪ್ರಮುಖ ಮಾರುತಿ ಸುಜುಕಿ ಈಗಾಗಲೇ ಕಳೆದ ವರ್ಷ ಮೂರು ಬಾರಿ ವಾಹನ ಬೆಲೆಗಳನ್ನು ಹೆಚ್ಚಲ ಮಾಡಿದೆ. ಜನವರಿಯಲ್ಲಿ 1.4%, ಏಪ್ರಿಲ್‌ನಲ್ಲಿ 1.6% ಮತ್ತು ಸೆಪ್ಟೆಂಬರ್‌ನಲ್ಲಿ 1.9% ರಷ್ಟು ಹೆಚ್ಚಿಸಿದೆ. ಜನವರಿ, ಏಪ್ರಿಲ್, ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಮತ್ತು ಎಲ್ಲಾ ಸಿಎನ್‌ಜಿ ರೂಪಾಂತರಗಳಿಗೆ ಮಾತ್ರ ಬೆಲೆಗಳನ್ನು ಹೆಚ್ಚಿಸಿತ್ತು. ಆಗ ಎಕ್ಸ್ ಶೋರೂಂ ಬೆಲೆಯಲ್ಲಿ(ದೆಹಲಿ) 15,000 ರೂ.ವರೆಗೆ ಏರಿಕೆಯಾಗಿತ್ತು. ಉಕ್ಕು, ಅಲ್ಯೂಮಿನಿಯಂ, ತಾಮ್ರ, ಪ್ಲಾಸ್ಟಿಕ್ ಮತ್ತು ಬೆಲೆಬಾಳುವ ಲೋಹಗಳಂತಹ ಅಗತ್ಯ ವಸ್ತುಗಳ ಬೆಲೆಯಲ್ಲಿ ಕಳೆದ ವರ್ಷದಿಂದ ಏರಿಕೆಯಾಗಿರುವುದರಿಂದ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ.