ನವದೆಹಲಿ: ಮಾರುತಿ ಕಾರ್ ಗಳ ಬೆಲೆಯಲ್ಲಿ ಶೇಕಡ 1.9 ರಷ್ಟು ಏರಿಕೆ ಮಾಡಲಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಸೆಲೆರಿಯೋ ಹೊರತುಪಡಿಸಿ ಉಳಿದ ಎಲ್ಲ ಮಾಡೆಲ್ ಕಾರ್ ಗಳ ಬೆಲೆಯನ್ನು ಶೇಕಡ 1.9 ರಷ್ಟು ಏರಿಕೆ ಮಾಡಲಾಗಿದೆ.
ಮಾರುತಿ ಸುಜುಕಿ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ. ಅಂದ ಹಾಗೆ, ಮಾರುತಿ ಸುಜುಕಿ ಕಂಪನಿ ಈ ವರ್ಷ ಮೂರನೇ ಬಾರಿಗೆ ಬೆಲೆ ಏರಿಕೆ ಮಾಡಿದೆ. ಕಳೆದ ಜನವರಿ ಮತ್ತು ಏಪ್ರಿಲ್ ನಲ್ಲಿ ಶೇಕಡ 3.5 ಬೆಲೆ ಏರಿಕೆ ಮಾಡಲಾಗಿತ್ತು. ತಾಮ್ರ, ಉಕ್ಕು ಸೇರಿದಂತೆ ತಯಾರಿಕಾ ಸಾಮಗ್ರಿಗಳ ಬೆಲೆ ದುಪ್ಪಟ್ಟಾಗಿದ್ದು, ಈ ಕಾರಣದಿಂದ ಕಾರ್ ಗಳ ಬೆಲೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.