ಮುಂಬೈ ಷೇರು ಪೇಟೆಯಲ್ಲಿ ಸೂಚ್ಯಂಕ ಏರಿಕೆಯಾಗಿದೆ. ದಿನದ ವಹಿವಾಟು ಆರಂಭವಾಗುತ್ತಿದ್ದಂತೆ 307 ಅಂಕ ಏರಿಕೆಯಾಗಿದೆ.
ಸೆನ್ಸೆಕ್ಸ್ 61,044 ಅಂಕಗಳಷ್ಟು, ನಿಫ್ಟಿ 18,261 ಅಂಕಗಳಿಗೆ ಏರಿಕೆಯಾಗಿದೆ. ಬ್ಯಾಂಕುಗಳು, ರಿಯಾಲಿಟಿ, ಐಟಿ ವಲಯಕ್ಕೆ ಲಾಭವಾಗಲಿದೆ ಎನ್ನಲಾಗಿದೆ.
ಭಾರತದಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಉತ್ತಮ ಆರಂಭ ಪಡೆದುಕೊಂಡಿದ್ದು, ಗುರುವಾರ ಧನಾತ್ಮಕ ಜಾಗತಿಕ ಸೂಚನೆಗಳನ್ನು ಬೆಂಬಲಿಸಿವೆ. ಮಾರುಕಟ್ಟೆಗಳು ಸಗಟು ಬೆಲೆ ಹಣದುಬ್ಬರ, ಟ್ರೇಡ್ ಬ್ಯಾಲೆನ್ಸ್ ಮತ್ತು ರಫ್ತು ಆಮದು ಡೇಟಾವನ್ನು ದಿನದ ನಂತರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸೆಂಚುರಿ ಟೆಕ್ಸ್ ಟೈಲ್ಸ್ ಅಂಡ್ ಇಂಡಸ್ಟ್ರೀಸ್, ಸೈಯಂಟ್, ಡೆನ್ ನೆಟ್ ವರ್ಕ್ಸ್, ಹೆಚ್.ಸಿ.ಎಲ್. ಟೆಕ್ನಾಲಜೀಸ್, ಮತ್ತು ಇಂಡಿಬುಲ್ಸ್ ರಿಯಲ್ ಎಸ್ಟೇಟ್ ಸೇರಿದಂತೆ ಕಂಪನಿಗಳು ಇಂದು ತಮ್ಮ ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಲಿವೆ.
ಇನ್ಫೋಸಿಸ್ ಮತ್ತು ವಿಪ್ರೋಗಳ ಧನಾತ್ಮಕ ಫಲಿತಾಂಶಗಳು ಸಂಸ್ಥೆಗಳು ಮಾರುಕಟ್ಟೆಯಲ್ಲಿ ಉತ್ತಮವಾಗಿ ಆರಂಭಿಸಲು ಸಹಾಯ ಮಾಡಿವೆ. ದಸರಾ ಹಬ್ಬದ ಪ್ರಯುಕ್ತ ಭಾರತೀಯ ಮಾರುಕಟ್ಟೆಗಳು ಶುಕ್ರವಾರ ಮುಚ್ಚಲ್ಪಡುತ್ತವೆ.