ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತೆ ಬದುಕೋದು ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಕೆಲವೊಮ್ಮೆ ಹಣದ ಅವಶ್ಯಕತೆಗಾಗಿ ನಮ್ಮತನವನ್ನ ಮಾರಿಕೊಂಡು ಕೆಲಸ ಮಾಡಬೇಕಾದ ಅವಶ್ಯಕತೆ ಇರುತ್ತೆ. ತೀರಾ ಕಡಿಮೆ ಜನರು ಮಾತ್ರ ಒತ್ತಡದ ಕೆಲಸಕ್ಕೆ ಗುಡ್ ಬೈ ಹೇಳಿ ಸ್ವಂತದ್ದೇನಾದರೂ ಮಾಡುವ ಧೈರ್ಯಕ್ಕೆ ಕೈ ಹಾಕ್ತಾರೆ.
ಮನೆಯಲ್ಲೇ ಕುಳಿತು ಪಡೆಯಿರಿ ಪಿವಿಸಿ ಆಧಾರ್ ಕಾರ್ಡ್
ಅಂದಹಾಗೆ ಈ ವಿಚಾರದ ಬಗ್ಗೆ ವಿವರಿಸೋಕೆ ಕಾರಣ ಕೂಡ ಇದೆ. ಟ್ರಾಫಿಕ್ ವಡಾಪಾವ್ ಮಾಲೀಕ ಎಂದೇ ಫೇಮಸ್ ಆಗಿರುವ ಗೌರವ್ ಲಾಂಡೆ ತಾನು ಹೇಗೆ ಈ ವಡಾಪಾವ್ ಮಾಡುವ ಕೆಲಸ ಆರಂಭಿಸಿದೆ ಎಂಬುದನ್ನ ಹೇಳಿಕೊಂಡಿದ್ದಾರೆ. ಬಾಂಬೆಯಲ್ಲಿ 30 ಸಾವಿರ ರೂಪಾಯಿ ಸಂಬಳಕ್ಕೆ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಗೌರವ್ ಇಲ್ಲಿನ ಟ್ರಾಫಿಕ್ ಜಂಜಾಟದಿಂದ ಬೇಸತ್ತು ಹೋಗಿದ್ದರು. ಪದವಿ ಶಿಕ್ಷಣ ಪೂರೈಸಿದ್ದರೂ ಸಹ ಯಾವುದೇ ಬಡ್ತಿ ಸಿಕ್ಕಿರಲಿಲ್ಲ. ಇದೆಲ್ಲದರಿಂದ ಬೇಸತ್ತ ಗೌರವ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಡಾಪಾವ್ ಮಾರಾಟ ಮಾಡುವ ಉದ್ಯಮಕ್ಕೆ ಕೈ ಹಾಕಿದ್ರು.
ಬಾಯಾರಿದ ಹದ್ದಿಗೆ ನೀರುಣಿಸಿದ ‘ಮಹಾನುಭಾವ’
ಅಂಗಡಿಯನ್ನ ನಿರ್ಮಾಣ ಮಾಡೋಕೆ ತಾಯಿ ಸಾಲ ಮಾಡಿ 1 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದರಂತೆ. ತಾಯಿ – ಮಗ ಇಬ್ಬರೂ ಸೇರಿ ಅಂಗಡಿಯನ್ನ ನಡೆಸುತ್ತಿದ್ದರು. ಬಳಿಕ ಪತ್ನಿ ಕೂಡ ಎಂಟ್ರಿ ಕೊಟ್ಟರು. ಸಾಕಷ್ಟು ಸವಾಲುಗಳನ್ನ ಎದುರಿಸಿದ ಗೌರವ್ ಇದೀಗ ವಡಾಪಾವ್ ಉದ್ಯಮದಲ್ಲೇ ಉತ್ತಮ ಲಾಭವನ್ನ ಗಳಿಸುತ್ತಿದ್ದಾರೆ.