ಜಿಪಿಎಸ್ ಆಧರಿತ ನೇವಿಗೇಷನ್ ವ್ಯವಸ್ಥೆಯ ದಿನಮಾನದಲ್ಲಿ ಬದುಕುತ್ತಿದ್ದರೂ ಸಹ, ಜನ ಅಡ್ರೆಸ್ ಹೇಳುವುದು ಅದೇ ಹಳೆಯ ಶೈಲಿಯಲ್ಲೇ, ಆಯಾ ಏರಿಯಾಗಳ ಲ್ಯಾಂಡ್ ಮಾರ್ಕ್ ಗುರುತು ಹಿಡಿದು ಹೇಳುವ ಅಭ್ಯಾಸವೇ ಇನ್ನೂ ಅಚ್ಚುಮೆಚ್ಚು.
ಈ ರೀತಿ ಅಡ್ರೆಸ್ ಹೇಳುವ ವಿಧಾನವನ್ನು ಬಲೇ ಗಂಭೀರವಾಗಿ ತೆಗೆದುಕೊಂಡ ವ್ಯಕ್ತಿಯೊಬ್ಬರು, ಇ-ಕಾಮರ್ಸ್ ಪೋರ್ಟಲ್‌ನಲ್ಲಿ ತಮಗೆ ಬೇಕಾದ ವಸ್ತುವೊಂದನ್ನು ಆರ್ಡರ್ ಮಾಡಿ ಡೆಲಿವರಿ ಅಡ್ರೆಸ್ ಹೇಗೆ ಕೊಟ್ಟಿದ್ದಾರೆ ಗೊತ್ತೇ?
”444 ಛೋಟಾ ಮಾತಾ ಮಂದಿರ, ಮಂದಿರದ ಎದುರು ಬರುತ್ತಲೇ ನನಗೆ ಫೋನ್ ಮಾಡಿ ಆಯ್ತಾ?” ಎಂದು ವಿಳಾಸಕ್ಕೆಂದು ಕೊಡಲಾದ ಜಾಗದಲ್ಲಿ ಬರೆದಿದ್ದಾರೆ. ಈ ಅಡ್ರೆಸ್‌ನ ಫೋಟೋ ವೈರಲ್ ಆಗಿದೆ. ದೇಶೀ ಟ್ವಿಟ್ಟಿಗರಿಗೆ ಈ ವಿಳಾಸ ಬಲೇ ಮಜ ಕೊಟ್ಟಿದ್ದು, ತಾವೂ ಮುಂದಿನ ದಿನಗಳಲ್ಲಿ ಈ ರೀತಿ ವಿಳಾಸ ಕೊಟ್ಟು ನೋಡುವುದಾಗಿ ಹೇಳಿದ್ದಾರೆ.