ಹ್ಯಾರಿ ಪಾಟರ್ ಕಾದಂಬರಿಯ ಪುಸ್ತಕಗಳ ಸಂಗ್ರಹ ಒಂದು ರೀತಿಯ ಆಸ್ತಿ ಇದ್ದಂತೆ. 90ರ ದಶಕದಲ್ಲಿ ಖರೀದಿ ಮಾಡಿದ ಪುಸ್ತಕಗಳನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಅವುಗಳನ್ನು ಹರಾಜಿಗೆ ಹಾಕಿದಲ್ಲಿ ನಿಮಗೆ ಮಿಲಿಯನ್‌ಗಟ್ಟಲೇ ದುಡ್ಡು ಬರಬಹುದು.
ಬ್ರಿಟನ್‌ನ ವ್ಯಕ್ತಿಯೊಬ್ಬರು 21 ವರ್ಷಗಳ ಹಿಂದೆ ಖರೀದಿ ಮಾಡಿದ್ದ ‘Harry Potter And The Philosopher’s Stone’ ಪುಸ್ತಕವೊಂದನ್ನು ಹರಾಜಿನಲ್ಲಿ ಇಟ್ಟು ತಾವೇ ಬೆಚ್ಚಿ ಬೀಳಿಸುವ ಮೊತ್ತವನ್ನು ಪಡೆದುಕೊಂಡಿದ್ದಾರೆ. ಈ ಪುಸ್ತಕಕ್ಕೆ $64,252 (48 ಲಕ್ಷ ರೂ.ಗಳು) ತೆತ್ತು ಖರೀದಿ ಮಾಡಲಾಗಿದೆ.
ಲಕ್ಸೆಂಬರ್ಗ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ ವೇಳೆ ಮಕ್ಕಳಿಗೆ ಇಂಗ್ಲಿಷ್ ಕಲಿಸಲೆಂದು ಖರೀದಿ ಮಾಡಿದ ಈ ಪುಸ್ತಕದ ಕೇವಲ 500 ಅವತರಣಿಕೆಗಳನ್ನು ಮಾತ್ರವೇ ಮುದ್ರಿಸಲಾಗಿತ್ತು. ಹ್ಯಾರಿ ಪಾಟರ್ ಸೀರೀಸ್ ಪುಸ್ತಕಗಳೊಂದಿಗೆ ಈ ಮಾಸ್ಟರ್‌ಪೀಸ್ ಪುಸ್ತಕವೂ ಸೇಫ್ ಆಗಿ ಶೆಲ್ಫ್‌ನಲ್ಲಿ ಭದ್ರವಾಗಿತ್ತು.
ಹೆಸರು ಹೇಳಲಿಚ್ಛಿಸಿದ ಈ ವ್ಯಕ್ತಿ, ತಮ್ಮ ಮಗಳ ಶಿಕ್ಷಣ ಸಾಲದ ಕಂತು ಪಾವತಿ ಮಾಡಲು ಈ ಪುಸ್ತಕವನ್ನು ಹರಾಜಿಗೆ ಹಾಕಿದ್ದಾರೆ ಎನ್ನಲಾಗಿದೆ.