ಆನ್ಲೈನ್ ಖಾತೆಗಳನ್ನು ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನೀವು ಈ ಕೆಳಗಿನ ಪಟ್ಟಿಯಲ್ಲಿರುವ ಪಾಸ್ವರ್ಡ್ ಹೊಂದಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ.
ಈ ವರ್ಷ ಅತಿ ಹೆಚ್ಚು ಬಳಕೆ ಮಾಡಲಾದ ಪಾಸ್ವರ್ಡ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅಂದ ಹಾಗೆ, ಕಳೆದ ವರ್ಷವೂ ಇಂತಹ ಸುಲಭವಾದ ಪಾಸ್ವರ್ಡ್ ಗಳ ಪಟ್ಟಿಯನ್ನು ನೀಡಲಾಗಿತ್ತು. ಆದರೂ ಹೆಚ್ಚಿನವರು ಇಂಥವುಗಳನ್ನು ಬಳಕೆ ಮಾಡುತ್ತಿದ್ದಾರೆ.
ಇವು ಸಾಮಾನ್ಯವಾಗಿ ಎಲ್ಲರೂ ಬಳಸುವ ಪಾಸ್ವರ್ಡ್ ಗಳಾಗಿದ್ದು, ಇವುಗಳನ್ನು ಬದಲಾಯಿಸುವುದು ಒಳ್ಳೆಯದು. ಇಲ್ಲದಿದ್ದರೆ ಪಾಸ್ವರ್ಡ್ ದುರ್ಬಳಕೆಯಾಗಿ ಸುರಕ್ಷತೆಗೆ ಅಪಾಯವಾಗಬಹುದು. ಬಹುತೇಕರು 123456 ಪಾಸ್ವರ್ಡ್ ಬಳಸುತ್ತಿದ್ದಾರೆ. ಸುಮಾರು 200 ಸಾಮಾನ್ಯ ಪಾಸ್ವರ್ಡ್ ಗಳನ್ನು ಪಟ್ಟಿಮಾಡಲಾಗಿದೆ. ಇವುಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನಾರ್ಡ್ ಪಾಸ್ ಹೇಳಿದೆ.
123456 ಪಾಸ್ವರ್ಡ್ ಅನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಿದ್ದು, ಇಂತಹ ಪಾಸ್ ವರ್ಡ್ ಬಳಸುವವರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಪಾಸ್ವರ್ಡ್ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.
ಸಾಮಾನ್ಯವಾಗಿ ಬಳಕೆಮಾಡುವ ಪಾಸ್ವರ್ಡ್ ಗಳ ಪಟ್ಟಿ ಇಲ್ಲಿದೆ.
- 123456
- 123456789
- picture1
- password
- 12345678
- 111111
- 123123
- 12345
- 1234567890
- senha
ನಾರ್ಡ್ ಪಾಸ್ ಪ್ರಕಾರ, ಬಹಳ ಜನ ಸರಳ ಮತ್ತು ಸುಲಭವಾಗಿ ನೆನಪಿಡುವ ಪಾಸ್ವರ್ಡ್ ಗಳನ್ನು ಬಳಸುತ್ತಾರೆ. ಇದರಿಂದ ತಮಗೆ ಅನುಕೂಲವಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ, ಇಂತಹ ಪಾಸ್ವರ್ಡ್ ಗಳಿಂದ ಸಮಸ್ಯೆಯಾಗಬಹುದು. ಸುಲಭದ ಪಾಸ್ವರ್ಡ್ ಬದಲಿಗೆ ಬೇರೆಯವರು ಬಳಸಲು ಸಾಧ್ಯವಾಗದ ರೀತಿಯ ಪಾಸ್ವರ್ಡ್ ಗೆ ಬದಲಿಸಿಕೊಳ್ಳಲು ತಿಳಿಸಲಾಗಿದೆ. ಸೈಬರ್ ಸುರಕ್ಷತೆಯ ದೃಷ್ಟಿಯಿಂದ ಪಾಸ್ವರ್ಡ್ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.