ಕಚೇರಿಯಲ್ಲಿ 8-10 ಗಂಟೆ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲವೇ ಕೆಲವು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ದೊಡ್ಡ ವಿಷ್ಯವೆಂದ್ರೆ ಸಂಪಾದನೆಗೆ ನೀವು ಯಾವುದೇ ಹೂಡಿಕೆ ಅಥವಾ ಖರ್ಚು ಮಾಡಬೇಕಾಗಿಲ್ಲ.
ಜಾಹೀರಾತುಗಳನ್ನು ಓದಿ ಸಂಪಾದನೆ : ಕೆಲವೊಂದು ವೆಬ್ ಸೈಟ್ ಸೈನ್ ಅಪ್ ಮಾಡಿ ಜಾಹೀರಾತನ್ನು ಓದಿದ್ರೆ ನಿಮಗೆ ಹಣ ಸಿಗಲಿದೆ. ಸೈನ್ ಅಪ್ ನಂತ್ರ ನಿಮಗೆ ಜಾಹೀರಾತು ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಕೆಲ ಸೈಟ್ ಗಳು ಎಸ್ಎಂಎಸ್ ಮೂಲಕ ಜಾಹೀರಾತನ್ನು ಕಳಿಸುತ್ತವೆ. ಅದನ್ನು ನೀವು ಓದಿದ್ರೆ ನಿಮಗೆ ಹಣ ನೀಡುತ್ತದೆ. ದಿನಕ್ಕೆ 10-20 ನಿಮಿಷ ಕಂಪ್ಯೂಟರ್ ಮುಂದೆ ಕುಳಿತು ಗಳಿಸುವ ಕೆಲಸ ಇದಾಗಿದೆ.
ಆನ್ಲೈನ್ ಮೈಕ್ರೋ ಕೆಲಸ : ಮೈಕ್ರೋ ಕೆಲಸವೆಂದ್ರೆ ಸಣ್ಣ ಟಾಸ್ಕ್. ಆನ್ಲೈನ್ ನಲ್ಲಿ ಕೆಲ ಸೆಕೆಂಡ್ ನಲ್ಲಿ ಟಾಸ್ಕ್ ಮುಗಿಸಿ ಹಣ ಗಳಿಸಬಹುದು. mTurk, MicroWorkers ನಂತಹ ವೆಬ್ ಸೈಟ್ ಗಳು ನಿಮಗೆ ಟಾಸ್ಕ್ ನೀಡುತ್ತದೆ. ಅದನ್ನು ಪೂರ್ತಿಗೊಳಿಸಿದ್ರೆ 5 ರೂಪಾಯಿಯಿಂದ 100 ರೂಪಾಯಿಯವರೆಗೆ ನೀವು ಗಳಿಸಬಹುದಾಗಿದೆ.
ಬ್ಲಾಗಿಂಗ್ : ಅಂತರ್ಜಾಲದಲ್ಲಿ ಸಾಮಾನ್ಯ ಬ್ಲಾಗ್ ಶುರು ಮಾಡಿ ಹಣ ಗಳಿಸಬಹುದು. ಒಳ್ಳೊಳ್ಳೆ ಸಂಗತಿಗಳನ್ನು ಪೋಸ್ಟ್ ಮಾಡಿ ಅದ್ರ ಪ್ರಚಾರ ಮಾಡಬೇಕು. ಜಾಹೀರಾತು ನೆಟ್ವರ್ಕ್ ಗೆ ಒಪ್ಪಿಗೆ ನೀಡಿ ಇದ್ರ ಮೂಲಕ ಹಣ ಸಂಪಾದನೆ ಮಾಡಬಹುದು.
ಆನ್ಲೈನ್ ಕಂಪನಿ ಪ್ರಚಾರ : ಮನೆಯಲ್ಲೇ ಕುಳಿತು ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಆನ್ಲೈನ್ ಮಾರ್ಕೆಟಿಂಗ್ ಕಂಪನಿಗಳ ಬಗ್ಗೆ ಜಾಹೀರಾತು ನೀಡಬಹುದು. Flipkart affiliate, Amazon.in affiliate ಸದಸ್ಯರಾಗಿ ಪ್ರತಿ ಸೇಲ್ ನಲ್ಲಿ ಶೇಕಡಾ 4ರಿಂದ 10ರಷ್ಟು ಕಮಿಷನ್ ಗಳಿಸಬಹುದು.