ಕೊರೊನಾ ವೈರಸ್ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗ್ತಿರುವ ಕಾರಣ ಕೆಲಸ ಕಳೆದುಕೊಂಡವರಿಗೆ ಹೊಸ ಉದ್ಯೋಗ ಸಿಗುವುದು ಕಷ್ಟವಾಗ್ತಿದೆ.
ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಾಣ್ತಿದ್ದವರು ನೀವಾಗಿದ್ದರೆ ಸುಲಭವಾಗಿ ಮಾಡಬಲ್ಲ ಬ್ಯುಸಿನೆಸ್ ಶುರು ಮಾಡಿ. ಕಡಿಮೆ ವೆಚ್ಚದಲ್ಲಿ ನಾವು ಹೇಳುವ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಸಂಪಾದಿಸಬಹುದು.
ಮೆಟ್ರೋ ನಗರಗಳಲ್ಲಿ ಕೆಲಸದ ಒತ್ತಡದಿಂದಾಗಿ ಜನರು ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ. ಅನೇಕ ಮಹಿಳೆಯರು ಕೂಡ ಕೆಲಸ, ಮನೆ ನಿಭಾಯಿಸಲು ಸಾಧ್ಯವಾಗದ ಕಾರಣ ಅಡುಗೆಯವರ ಮೊರೆ ಹೋಗ್ತಿದ್ದಾರೆ. ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಇದ್ರ ಬಗ್ಗೆ ಸಾಕಷ್ಟು ಜಾಹಿರಾತುಗಳು ಬರ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡು ನೀವು ಟಿಫನ್ ಸರ್ವೀಸ್ ಶುರು ಮಾಡಬಹುದು. ಮನೆಯಿಂದಲೇ ಈ ವ್ಯಾಪಾರ ಶುರು ಮಾಡಬಹುದು.
ಕಾಲೇಜು ವಿದ್ಯಾರ್ಥಿಗಳು,ಮನೆಯಿಂದ ದೂರವಿರುವ ಜನರು,ಕೆಲಸದಲ್ಲಿರುವ ಯುವಕರು ಮನೆಯಲ್ಲಿ ಮಾಡಿದ,ರುಚಿಯಾದ,ಕಡಿಮೆ ಬೆಲೆಯ ಆಹಾರ ಸೇವನೆಯನ್ನು ಇಷ್ಟಪಡುತ್ತಾರೆ. ಅಂತವರನ್ನು ಹುಡುಕಿ ನೀವು ಅವರಿಗೆ ಟಿಫನ್ ಸರ್ವೀಸ್ ನೀಡಬಹುದು. ಮೂರು ಹೊತ್ತು ಅಥವಾ ನಿಮಗೆ ಅನುಕೂಲವಾದ ಸಮಯ ಆಯ್ದುಕೊಂಡು ಟಿಫನ್,ಊಟ ನೀಡಬಹುದು. ಬಾಯಿಯಿಂದ ಬಾಯಿಗೆ ಹರಡಿ ಈ ವ್ಯಾಪಾರ ಹೆಚ್ಚು ಪ್ರಸಿದ್ಧಿಗೆ ಬರುತ್ತದೆ. ಸಾಮಾಜಿಕ ಜಾಲತಾಣಗಳನ್ನೂ ನೀವು ಬಳಸಿಕೊಳ್ಳಬಹುದು. ಸುಮಾರು 8ರಿಂದ 10 ಸಾವಿರ ರೂಪಾಯಿಯಲ್ಲಿ ನೀವು ಈ ವ್ಯಾಪಾರ ಶುರು ಮಾಡಬಹುದು. ಕೆಲವೇ ತಿಂಗಳಲ್ಲಿ ನೀವು ಲಾಭಗಳಿಸಲು ಶುರು ಮಾಡುತ್ತೀರಿ. ನಿಮ್ಮ ಕೈ ಅಡುಗೆ ರುಚಿಯಾಗಿದ್ದರೆ ತಿಂಗಳಿಗೆ 1 ಲಕ್ಷ ರೂಪಾಯಿವರೆಗೂ ನೀವು ಗಳಿಸಬಹುದು.
ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಹಾಗೆ ಶುಚಿತ್ವದ ಜೊತೆ ತಾಳ್ಮೆ ಬಹಳ ಮುಖ್ಯ. ಮೊದಲ ದಿನವೇ ಇದ್ರಿಂದ ಲಾಭ ಸಿಗುವುದಿಲ್ಲ ಎಂಬುದನ್ನು ನೀವು ಅರಿತಿರಬೇಕು. ಹಾಗೆ ಮೊದಲ ದಿನವೇ 10-20 ಗ್ರಾಹಕರು ಸಿಗಲು ಸಾಧ್ಯವಿಲ್ಲವೆಂಬ ಸತ್ಯವನ್ನೂ ನೀವು ತಿಳಿದಿರಬೇಕು.