ಕಚೇರಿಗೆ ಹೋಗಿ ಕೆಲಸ ಮಾಡುವವರಿಗಿಂತ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಇಂಟರ್ನೆಟ್ ವ್ಯವಸ್ಥೆ ಇದನ್ನು ಸುಲಭ ಮಾಡಿದೆ. ಮದುವೆಯಾಗಿ ಮಕ್ಕಳಾದ್ಮೇಲೆ ಮನೆ, ಮಕ್ಕಳನ್ನು ನೋಡಿಕೊಂಡು ಕೆಲಸಕ್ಕೆ ಹೋಗೋದು ಕಷ್ಟ. ಅಂತ ಮಹಿಳೆಯರ ಮೊದಲ ಆಯ್ಕೆ ಮನೆಯಲ್ಲಿಯೇ ಮಾಡುವ ಉದ್ಯೋಗ.
ಮನೆಯಲ್ಲಿ ಮಾಡುವ ಉದ್ಯೋಗಗಳ ಬಗ್ಗೆ ಆನ್ಲೈನ್ ಗಳಲ್ಲಿಯೇ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಆದ್ರೆ ಎಲ್ಲವನ್ನು ನಂಬುವುದು ಕಷ್ಟ. ಮಾಡಿದ ಕೆಲಸಕ್ಕೆ ಸರಿಯಾದ ಸಂಬಳ ಸಿಗುತ್ತದೆ ಎಂಬುದು ಖಾತ್ರಿಯಾದ್ರೆ ಮಾತ್ರ ಆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ. ಮನೆಯಲ್ಲಿಯೇ ಮಾಡುವ ಕೆಲ ಕೆಲಸಗಳ ಪಟ್ಟಿ ಇಲ್ಲಿದೆ.
ಮನೆಪಾಠ : ವಿದ್ಯಾರ್ಥಿಗಳಿಗೆ ನೀವು ಮನೆಪಾಠ ಮಾಡಬಹುದು. ಇದಕ್ಕಾಗಿ ಬಂಡವಾಳ ಬೇಕಿಲ್ಲ. ಇದರಿಂದ ನಿಮಗೂ ಕಲಿಕೆಯಲ್ಲಿ ಹಿಡಿತ ಸಿಗುತ್ತೆ. ಮುಂದಿನ ದಿನಗಳಲ್ಲಿ ನೀವು ಉದ್ಯೋಗಕ್ಕೆ ಹೋಗಲು ಸಿದ್ಧರಾದ್ರೆ ನಿಮಗೆ ಈ ಅನುಭವ ಉಪಯೋಗವಾಗುತ್ತೆ.
ಶೇರ್ ಮಾರ್ಕೆಟ್ : ಶೇರ್ ಮಾರ್ಕೆಟ್ ನಲ್ಲಿ ನೀವು ಪ್ರೀ ಲಾನ್ಸರ್ ರೀತಿಯಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ಇದಕ್ಕೆ ಕೊಂಚ ಮಟ್ಟಿಗಿನ ಬಂಡವಾಳ ಬೇಕು. ಆರಂಭದಲ್ಲಿ ಚಿಕ್ಕಪುಟ್ಟ ಶೇರ್ ಗಳನ್ನ ಖರೀದಿ ಮಾಡಿ ಅವುಗಳನ್ನ ಮಾರಿ. ಇಲ್ಲಿ ಅನುಭವ ಬಹಳ ಮುಖ್ಯ. ಕಡಿಮೆ ಹಣ ಹೂಡಿ ಅನುಭವ ಪಡೆದ ನಂತ್ರ ದೊಡ್ಡ ಮೊತ್ತಕ್ಕೆ ಕೈ ಹಾಕಿ.
ಕಂಟೆಂಟ್ ರೈಟರ್ : ಇದು ಪ್ರಸಿದ್ಧಿಯಾಗಿರುವ ಆನ್ಲೈನ್ ಉದ್ಯೋಗ. ಇದ್ರಲ್ಲಿ ಸ್ವಲ್ಪ ಮಟ್ಟಿಗಿನ ಅನುಭವ ನಿಮಗಿದ್ದರೆ ನಿಮ್ಮದೆ ಒಂದು ಪ್ರೊಫೈಲ್ ತಯಾರಿಸಿ ನೀವು ಆನ್ಲೈನ್ ಗೆ ಅಪ್ಲೋಡ್ ಮಾಡಿ. ನಂತ್ರ ತಾನಾಗಿಯೇ ಉದ್ಯೋಗ ಹುಡುಕಿಕೊಂಡು ಬರುತ್ತದೆ.
ಬೇಕರಿ : ಅಡುಗೆಯಲ್ಲಿ ಆಸಕ್ತಿಯಿದ್ದು, ಸ್ವಲ್ಪ ಸಮಯ ಸಿಗುತ್ತೆ ಎಂದಾದ್ರೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ರುಚಿ ರುಚಿ ಬೇಕರಿ ಐಟಂ ತಯಾರಿಸಿ ಬೇಕರಿಗೆ ಮಾರಾಟ ಮಾಡಬಹುದು. ಅಥವಾ ನೀವೇ ನೇರವಾಗಿ ಗ್ರಾಹಕರಿಗೆ ಮುಟ್ಟಿಸಬಹುದು.
ಇನ್ನೂ ಇದೇ ರೀತಿ ನೋಡ್ತಾ ಹೋದರೆ ಚಿಕ್ಕಪುಟ್ಟ ಬಂಡವಾಳದ ಅನೇಕ ಉದ್ಯೋಗಗಳನ್ನ ಮಾಡಬಹುದಾಗಿದೆ. ಅತಿ ಬಂಡವಾಳವನ್ನ ಹೂಡದೆಯೇ ನೀವು ದುಡ್ಡನ್ನ ಗಳಿಸಬಹುದು. ಮೇಣದ ಬತ್ತಿ, ಗೊಂಬೆಗಳು ಮತ್ತು ಮನೆಯಲ್ಲೇ ಅಡುಗೆಯನ್ನ ತಯಾರಿಸಿ ವ್ಯಾಪಾರವನ್ನ ಶುರು ಮಾಡಬಹುದು. ಸರ್ಕಾರ ಇಂತಹವರಿಗೆಂದು ಹಲವು ಯೋಜನೆಗಳನ್ನ ಜಾರಿಗೆ ತಂದಿದೆ.