ಮಹೀಂದ್ರ ಎಲೆಕ್ಟ್ರಿಕ್ ತನ್ನ ಹೊಸ ಎಲೆಕ್ಟ್ರಿಕ್ ತ್ರಿಚಕ್ರದ ಕಾರ್ಗೋ ಮಾದರಿಯ ಟ್ರೇ ಜೋರ್ನ್ನ ಆರಂಭಿಕ ಬೆಲೆ 2.73 ಲಕ್ಷ ರೂಪಾಯಿಗೆ ಬಿಡುಗಡೆ ಮಾಡೋದಾಗಿ ಹೇಳಿದೆ. ಡಿಸೆಂಬರ್ ತಿಂಗಳಿನಿಂದ ದೇಶದ ಆದ್ಯ ಶೋರೂಂಗಳಲ್ಲಿ ಈ ರಿಕ್ಷಾ ಲಭ್ಯವಿರಲಿದೆ.
ಆತ್ಮನಿರ್ಭರ್ ಭಾರತಕ್ಕೆ ಪುಷ್ಠಿ ನೀಡುವ ಸಲುವಾಗಿ ನಾವು ಈ ವಾಹನ ತಯಾರಿಸಿದ್ದೇವೆ. ಕೈಗೆಟಕುವ ದರದಲ್ಲಿ ಈ ರಿಕ್ಷಾ ಲಭ್ಯವಿರೋದ್ರಿಂದ ಸಾಮಾನ್ಯ ಜನರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಇದನ್ನ ಖರೀದಿ ಮಾಡೋದು ಸುಲಭವಾಗಲಿದೆ ಅಂತಾ ಮಹೀಂದ್ರಾ & ಮಹೀಂದ್ರಾ ಎಂಡಿ ಹಾಗೂ ಸಿಇಓ ಪವನ್ ಗೋಯೆಂಕಾ ಹೇಳಿದ್ದಾರೆ.
ಈ ಹೊಸ ತ್ರಿಚಕ್ರ ವಾಹನ ಡಿಸೇಲ್ ಕಾರ್ಗೋ 3 ಇತರೆ ವಾಹನಗಳಿಗೆ ಹೋಲಿಸಿದ್ರೆ ವಾರ್ಷಿಕವಾಗಿ 60000 ರೂ. ಉಳಿತಾಯ ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಈ ವಾಹನವನ್ನ ಅಭಿವೃದ್ಧಿಪಡಿಸಲಾಗಿದೆ. ಲಿಥಿಯಂ ಐಯಾನ್ ಬ್ಯಾಟರಿ ಹಾಗೂ 55 ಕೆಜಿ ಬೆಸ್ಟ್ ಇನ್ ಸೆಗ್ಮೆಂಟ್ ಪೇಲೋಡ್ ಇರಲಿದೆ. ಈ ವಾಹನವನ್ನ 15 ಎಎಂಪಿ ಸಾಕೆಟ್ನಲ್ಲಿ ಪ್ಲಗ್ ಮಾಡುವ ಮೂಲಕ ಚಾರ್ಜ್ ಮಾಡಬಹುದಾಗಿದೆ.