ನವದೆಹಲಿ: ದೇಶದಲ್ಲಿ ಅನೇಕ ಸೌಲಭ್ಯ, ಸೇವೆ ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಡಿಜಿಟಲ್ ಯುಗದಲ್ಲಿ ಎಂಆಧಾರ್ ಕಾರ್ಡ್ ಅನೇಕ ಪ್ರಯೋಜನ ನೀಡಲಿದೆ.
ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ಅಭಿವೃದ್ಧಿಪಡಿಸಿದ ಎಂಆಧಾರ್ ಜನರಿಗೆ ಅನೇಕ ಅವಕಾಶ ಕಲ್ಪಿಸಿದೆ. ಇದನ್ನು ದೇಶದಲ್ಲಿ ಎಲ್ಲಿಯಾದರೂ ಬಳಸಬಹುದಾಗಿದೆ. ಆಧಾರ್ ಕಾರ್ಡ್ ಕೊಂಡೊಯ್ಯುವ ಅಗತ್ಯವಿರುವುದಿಲ್ಲ ಎಂದು ಹೇಳಲಾಗಿದೆ.
ಯುಐಡಿಎಐ ನಿಯಮಗಳ ಪ್ರಕಾರ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳಲ್ಲಿ ಎಂಆಧಾರ್ ಅನ್ನು ಮಾನ್ಯ ಐಡಿ ಪುರಾವೆಯಾಗಿ ಸ್ವೀಕರಿಸಲಾಗಿದೆ. ಎಂಆಧಾರ್ ಅನ್ನು ಆಫ್ಲೈನ್ ಮೋಡ್ ನಲ್ಲಿ ಹಲವು ಬದಲಾವಣೆ ಮಾಡಬಹುದು. ಗ್ರಾಹಕರ ಆಧಾರ್ ಪರಿಶೀಲನೆ ಬಯಸುವ ಸೇವಾ ಕೇಂದ್ರಗಳಲ್ಲಿ ಕೆವೈಸಿ ಅಥವಾ ಕ್ಯೂಆರ್ ಕೋಡ್ ಹಂಚಿಕೊಳ್ಳಬಹುದು.
ಎಂಆಧಾರ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಅಥವಾ ಆಧಾರ್ ರಿಪ್ರಿಂಟ್ ಗೆ ಆದೇಶಿಸುವ ಮೂಲಕ ನಿಮ್ಮ ಆಧಾರ್ ಆಫ್ ಲೈನ್ ನಲ್ಲಿ ಮೋಡ್ ನಲ್ಲಿಯೂ ತೋರಿಸಬಹುದು.
ನೀವು ಅಗತ್ಯವಾದ ಸಂದರ್ಭದಲ್ಲಿ ಐಡಿ ಪ್ರೂಫ್ ತೋರಿಸಬೇಕಾದರೆ ಆಫ್ಲೈನ್ ಮೋಡ್ ನಲ್ಲಿಯೂ ತೋರಿಸಬಹುದು. ಡಾಕ್ಯುಮೆಂಟ್ ಪ್ರೂಫ್ ಇಲ್ಲದೇ ಎಂಆಧಾರ್ ನಲ್ಲಿ ವಿಳಾಸ ನವೀಕರಿಸಬಹುದು.
ಒಂದು ಫೋನ್ ಮೊಬೈಲ್ ಫೋನ್ ನಲ್ಲಿ ಐವರು ಕುಟುಂಬ ಸದಸ್ಯರ ಆಧಾರ್ ಇರಿಸಿಕೊಳ್ಳಬಹುದು. ಎಂಆಧಾರ್ ಕಾರ್ಡ್ ಇದ್ದಲ್ಲಿ ಕಾಗದರಹಿತವಾಗಿ ಇ-ಕೆವೈಸಿ ಅಥವಾ ಕ್ಯೂಆರ್ ಕೋಡ್ ಸೇವೆಯನ್ನು ಒದಗಿಸುವ ಏಜೆನ್ಸಿಗಳಿಗೆ ಹಂಚಿಕೊಳ್ಳಬಹುದಾಗಿದೆ.
ಆಧಾರ್ ಎಸ್ಎಮ್ಎಸ್ ಸೇವೆಯನ್ನು ಆಫ್ಲೈನ್ ಮೋಡ್ ನಲ್ಲಿಯೂ ಕೂಡ ಬಳಸಬಹುದು. ಎಂಆಧಾರ್ ಮೂಲಕ ಯಾವುದೇ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ಕಾಯ್ದಿರಿಸಬಹುದು ಎಂದು ಹೇಳಲಾಗಿದೆ.