ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕ ಉತ್ತೇಜನ ಪ್ಯಾಕೇಜ್ ಪ್ರಕಟಿಸಿದ್ದು ಕೇಂದ್ರ ಸರ್ಕಾರಿ ನೌಕರರಿಗೆ ರಜಾಕಾಲದ ಪ್ರಯಾಣ ಭತ್ಯೆ(LTC) ನಗದು ಗಿಫ್ಟ್ ನೀಡಲಾಗಿದೆ.
ಎಲ್.ಟಿ.ಸಿ. ನಗದು ಯೋಜನೆಯನ್ನು ಪ್ರಯಾಣಿಸದಿದ್ದರು ಪ್ರಯೋಜನ ಪಡೆಯಲು ಆಯ್ಕೆಯ ಅವಕಾಶ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯೋಜನೆಯ ಅನ್ವಯ ಪ್ರಯಾಣ ಹೊರತುಪಡಿಸಿ ಯಾವುದಾದರೂ ಖರ್ಚು ಮಾಡುವ ಆಯ್ಕೆ ನೀಡಲಾಗಿದೆ.
ಕೇಂದ್ರ ಸರ್ಕಾರಿ ನೌಕರರು ರಜೆ ಪ್ರಯಾಣದ ರಿಯಾಯಿತಿ ಅಥವಾ ರಜೆ ಪ್ರಯಾಣ ಭತ್ಯೆಗಳ ತೆರಿಗೆ ವಿನಾಯಿತಿ ಬದಲಾಗಿ ಸರಕು ಮತ್ತು ಸೇವೆಗಳನ್ನು ಖರೀದಿಸಲು/ಪಡೆಯಲು ಅರ್ಹರಾಗಿರುತ್ತಾರೆ.
ರಜೆ ಎನ್ ಕ್ಯಾಶ್ ಮೆಂಟ್ ಗೆ ತೆರಿಗೆ ವಿಧಿಸಲಾಗುತ್ತದೆ. ಕೊರೋನಾ ಸಾಂಕ್ರಮಿಕ ರೋಗ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಕೇಂದ್ರ ಸರ್ಕಾರಿ ನೌಕರರು ಎಲ್.ಟಿ.ಸಿ. ಶುಲ್ಕ ಮತ್ತು ರಜೆ ಎನ್ ಕ್ಯಾಶ್ ಮೆಂಟ್ ಗೆ ಸಮಾನವಾದ ನಗದು ಹಣವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.