ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಎಲ್.ಟಿ.ಸಿ. ನಗದು ಯೋಜನೆಯನ್ನು ಘೋಷಿಸಿದೆ. ಎಲ್.ಟಿ.ಸಿ. ಅಥವಾ ಎಟಿಎ ತೆರಿಗೆ ಮುಕ್ತದ ಬದಲಾಗಿ ನೌಕರರು ಎಲ್.ಟಿ.ಸಿ. ನಗದು ವೋಚರ್ ಪಡೆಯಬಹುದು.
ಸರ್ಕಾರಿ ನೌಕರರು ಜಿಎಸ್ಟಿ ಪಾವತಿಸಬೇಕಾದ ಆಹಾರೇತರ ವಸ್ತುಗಳ ಖರೀದಿಗೆ ಮಾತ್ರ ಈ ವೋಚರ್ ಬಳಸಬಹುದು. ಜಿಎಸ್ಟಿ ದರ ಶೇಕಡಾ 12 ಅಥವಾ ಅದಕ್ಕಿಂತ ಹೆಚ್ಚಿರುವ ವಸ್ತುಗಳ ಖರೀದಿಗೆ ಮಾತ್ರ ನೌಕರರು ಈ ವೋಚರ್ ಬಳಸಬಹುದು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಸರ್ಕಾರವು ತನ್ನ ಉದ್ಯೋಗಿಗಳಿಗೆ ತಮ್ಮ ಆಯ್ಕೆಯ ಗಮ್ಯಸ್ಥಾನಕ್ಕೆ ಪ್ರಯಾಣಿಸಲು ಎಲ್‌ಟಿಸಿಯನ್ನು ನೀಡುತ್ತದೆ. ಸ್ವಂತ ಊರಿಗೆ ಪ್ರಯಾಣಿಸಲು ಇದನ್ನು ಬಳಸಬಹುದು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ನೌಕರರು ಪ್ರಯಾಣಿಸುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ನಗದು ಚೀಟಿ ನೀಡಲು ಸರ್ಕಾರ ನಿರ್ಧರಿಸಿದೆ. ಇದನ್ನು 31 ಮಾರ್ಚ್ 2021 ರೊಳಗೆ ಖರ್ಚು ಮಾಡಬೇಕಾಗುತ್ತದೆ.
ನೌಕರರಿಗೆ ಎಲ್‌ಟಿಸಿ ಶುಲ್ಕ ಮತ್ತು ರಜೆ ಎನ್‌ಕ್ಯಾಶ್‌ಮೆಂಟ್‌ಗೆ ಸಮನಾದ ನಗದು ಸಿಗಬೇಕೆಂದ್ರೆ ಕೆಲವೊಂದು ಷರತ್ತುಗಳಿವೆ.
ನೌಕರನು ರಜೆ ಎನ್‌ಕ್ಯಾಶ್‌ಮೆಂಟ್‌ನ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಮತ್ತು ಎಲ್‌ಟಿಸಿಯ ಮೂರು ಪಟ್ಟು ಮತ್ತು ಒಂದು ಬಾರಿ ರಜೆ ಎನ್‌ಕ್ಯಾಶ್‌ಮೆಂಟ್ ಮೊತ್ತವನ್ನು ಆಹಾರೇತರ ವಸ್ತುಗಳನ್ನು ಖರೀದಿಸುವ ಉದ್ದೇಶದಿಂದ ಖರ್ಚು ಮಾಡಬೇಕು.
ಖರೀದಿಸಿದ ವಸ್ತುಗಳು ಅಥವಾ ಸೇವೆಗಳು ಜಿಎಸ್ಟಿ ದರ ಶೇಕಡಾ 12ಕ್ಕಿಂತ ಕಡಿಮೆಯಿರಬಾರದು.
ಖರೀದಿ ಡಿಜಿಟಲ್ ಮೋಡ್ ಮೂಲಕ ಜಿಎಸ್ಟಿ ನೋಂದಾಯಿತ ಮಾರಾಟಗಾರರು ಅಥವಾ ಸೇವಾ ಪೂರೈಕೆದಾರರಿಂದ ಆಗಿರಬೇಕು.
ಉದ್ಯೋಗಿ ಜಿಎಸ್ಟಿ ಸಂಖ್ಯೆ ಮತ್ತು ಪಾವತಿಸಿದ ಜಿಎಸ್ಟಿ ಮೊತ್ತ ಸೂಚಿಸುವ ಚೀಟಿ ಪಡೆಯಬೇಕು.
ಸರಕು, ಸೇವೆಗಳ ಹಣವನ್ನು ಮಾರ್ಚ್ 31, 2021 ರ ಮೊದಲು ಖರ್ಚು ಮಾಡಬೇಕು.
ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಲು ಅರ್ಹತೆ ಹೊಂದಿರುವ ನೌಕರರಿಗೆ 36,000 ರೂಪಾಯಿ ನೀಡಲಾಗುವುದು. ಇದು ಪ್ರತಿ ವ್ಯಕ್ತಿಗೆ ರೌಂಡ್ ಟ್ರಿಪ್ ಬೆಲೆಯಾಗಿದೆ.
ವಿಮಾನಯಾನದಲ್ಲಿ ಎಕಾನಮಿಕ್ ಕ್ಲಾಸ್ ನಲ್ಲಿ ಸಂಚರಿಸುವ ನೌಕರರಿಗೆ 20,000 ರೂಪಾಯಿ ಮೌಲ್ಯದ ವೋಚರ್ ನೀಡಲಾಗುವುದು.
ಯಾವುದೇ ರೈಲು ಬೋಗಿಯಲ್ಲಿ ಪ್ರಯಾಣಿಸುವ ಅರ್ಹತೆ ಹೊಂದಿರುವ ನೌಕರರಿಗೆ 6000 ರೂಪಾಯಿ ಮೌಲ್ಯದ ವೋಚರ್ ನೀಡಲಾಗುವುದು.
ಈ ಯೋಜನೆ ಕೇಂದ್ರ ಸರ್ಕಾರ ಮತ್ತು ಪಿಎಸ್ಯು ಉದ್ಯೋಗಿಗಳಿಗೆ ಲಭ್ಯವಿರುತ್ತದೆ. ಇದ್ರ ಆಯ್ಕೆ ನೌಕರರಿಗೆ ಬಿಟ್ಟಿದ್ದು.