ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ(ತುಟ್ಟಿಭತ್ಯೆ) ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಮೇ 31 ರಂದು ಅಥವಾ ಅದಕ್ಕಿಂತ ಮೊದಲು ತಮ್ಮ ರಜೆ ಪ್ರಯಾಣ ರಿಯಾಯಿತಿ(LTC) ಪ್ರಯೋಜನ ಪಡೆಯಲು ಸಾಧ್ಯವಾಗದ ಕೇಂದ್ರ ಸರ್ಕಾರಿ ನೌಕರರು ನಿಗದಿತ ದಿನಾಂಕದ ನಂತರವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಕೊರೋನಾ ಕಾರಣದಿಂದಾಗಿ ನೌಕರರಿಗೆ ಆದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್.ಟಿ.ಸಿ. ಪ್ರಯೋಜನ ಪಡೆಯಲು ಅವಧಿ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಯಾಣ ವೆಚ್ಚಗಳಿಗೆ ಬದಲಾಗಿ ಖರೀದಿಸಿದ ಸರಕು ಮತ್ತು ಸೇವೆಗಳ ಬಿಲ್ಗಳ ತೆರಿಗೆ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರಿ ನೌಕರರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಕಳೆದ ಅಕ್ಟೋಬರ್ನಲ್ಲಿ ರಜೆ ಪ್ರಯಾಣ ರಿಯಾಯಿತಿ(ಎಲ್ಟಿಸಿ) ನಗದು ಚೀಟಿ ಯೋಜನೆಯನ್ನು ಪರಿಚಯಿಸಿತ್ತು.