alex Certify ಹಬ್ಬದ ಪ್ರಯುಕ್ತ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಪ್ರಯುಕ್ತ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ

ನವದೆಹಲಿ: ಗ್ರಾಹಕರ ಖರ್ಚು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಎರಡು ಯೋಜನೆಗಳನ್ನು ಘೋಷಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.

ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು ಚೀಟಿ ಯೋಜನೆ. ಎರಡನೇಯದು ಬಂಡವಾಳ ವೆಚ್ಚಕ್ಕೆ ಸಂಬಂಧಿಸಿದ್ದಾಗಿದೆ. ಕೇಂದ್ರ ಸರ್ಕಾರ ಆರ್ಥಿಕತೆ ಸುಧಾರಿಸಲು ಎಲ್‌ಟಿಸಿ ಅಡಿಯಲ್ಲಿ ನಗದು ಚೀಟಿ ಯೋಜನೆಯನ್ನು ಘೋಷಿಸಲಾಗಿದೆ. ಇದರ ಅಡಿಯಲ್ಲಿ ಕೇಂದ್ರ ಉದ್ಯೋಗಿಗಳಿಗೆ 4 ವರ್ಷಗಳಿಗೊಮ್ಮೆ ನಗದು ಚೀಟಿ ಸೌಲಭ್ಯ ನೀಡಲಾಗುವುದು.

ಭಾರತದ ಯಾವುದೇ ಪ್ರದೇಶದಲ್ಲಿ ಪ್ರಯಾಣ ಬೆಳೆಸಲು ಕೇಂದ್ರ ನೌಕರರಿಗೆ ಎಲ್‌ಟಿಸಿ ನೀಡಲಾಗುವುದು. ಬೇರೆ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲವೆಂದ್ರೆ ಎರಡು ಬಾರಿ ತಮ್ಮ ತವರಿಗೆ ಹೋಗಲು ಇದನ್ನು ನೀಡಲಾಗುತ್ತದೆ. ಈ ಯೋಜನೆಯಡಿ, ಸ್ಕೇಲ್ ಮತ್ತು ಶ್ರೇಣಿಯನ್ನು ಅವಲಂಬಿಸಿ ನೌಕರರಿಗೆ ವಾಯು ಅಥವಾ ರೈಲು ಪ್ರಯಾಣಕ್ಕೆ ಮರು ಪಾವತಿ ಮಾಡಲಾಗುತ್ತದೆ. ಇದಲ್ಲದೆ, 10 ದಿನಗಳ ರಜೆ ( ಪೇ ಮತ್ತು ಡಿಎ) ಸಹ ಇರುತ್ತದೆ.

ಈ ಯೋಜನೆಗೆ ಕೇಂದ್ರ ಸರ್ಕಾರವು 5,675 ಕೋಟಿ ರೂಪಾಯಿ ಮೀಸಲಿಡಲಿದೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸರ್ಕಾರಿ ಕಂಪನಿಗಳು ಇದರ ಲಾಭ ಪಡೆಯಬಹುದು. ಎಲ್‌ಟಿಸಿ ಟಿಕೆಟ್‌ಗಳ ತೆರಿಗೆ ವಿನಾಯಿತಿಯ ಲಾಭ ರಾಜ್ಯ ನೌಕರರು ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೂ ಸಿಗಲಿದೆ. ರಾಜ್ಯ ಸರ್ಕಾರಗಳು ಅಥವಾ ಖಾಸಗಿ ಕಂಪನಿಗಳು ಇಂಥಹ ಘೋಷಣೆ ಮಾಡಿದರೆ, ಅವರ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿಯ ಲಾಭ ಸಿಗುತ್ತದೆ.

ಗೆಜೆಟೆಡ್ ಅಲ್ಲದ ನೌಕರರಿಗಾಗಿ ಸ್ಪೆಷಲ್ ಫೆಸ್ಟಿವಲ್ ಅಡ್ವಾನ್ಸ್ ಸ್ಕೀಂ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಈ ಯೋಜನೆಯಡಿ ಎಲ್ಲಾ ಕೇಂದ್ರ ನೌಕರರು ಪ್ರಿಪೇಯ್ಡ್ ರುಪೇ ಕಾರ್ಡ್ ಮೂಲಕ ಬಡ್ಡಿ ಇಲ್ಲದೆ 10,000 ರೂಪಾಯಿವರೆಗೆ ಸಾಲ ಪಡೆಯಬಹುದು. ಇದನ್ನು ಮಾರ್ಚ್ 31, 2021 ರ ಮೊದಲು ಖರ್ಚು ಮಾಡಬೇಕಾಗಿದೆ.

ಇಷ್ಟೇ ಅಲ್ಲದೆ ರಾಜ್ಯ ಸರ್ಕಾರಗಳಿಗೆ 50 ವರ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ಘೋಷಣೆ ಮಾಡಿದ್ದಾರೆ. ಬಜೆಟ್‌ನಲ್ಲಿ ನಿಗದಿಪಡಿಸಿದ ಬಂಡವಾಳ ವೆಚ್ಚದ ಹೊರತಾಗಿ, ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರವು ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...