
ಎರಡು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ LPG ಮೇಲಿನ ಸಬ್ಸಿಡಿ ಗ್ರಾಹಕರ ಖಾತೆಗೆ ಜಮಾ ಮಾಡುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಬಹುದು. LPG ಗ್ರಾಹಕರು ಸರ್ಕಾರದಿಂದ ದೊಡ್ಡ ಉಡುಗೊರೆಯನ್ನು ಪಡೆಯಬಹುದು ಎನ್ನಲಾಗಿದೆ.
ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್.ಪಿ.ಜಿ.) ಮೇಲಿನ ಬಜೆಟ್ ಸಬ್ಸಿಡಿಯು 2022 ರ FY ನಲ್ಲಿ ಬಹುತೇಕ ಮುಗಿದ ನಂತರ, ಈಗ ಕೇಂದ್ರ ಸರ್ಕಾರವು FY 2023 ರಲ್ಲಿ ಅದನ್ನು ಮತ್ತೆ ಪ್ರಾರಂಭಿಸಬಹುದು. ಇದು ಸಾಧ್ಯವಾದಲ್ಲಿ ಸುಮಾರು 9 ಕೋಟಿ ಜನರು ದುಬಾರಿ ಎಲ್ಪಿಜಿಯಿಂದ ಸ್ವಲ್ಪ ಪರಿಹಾರ ಪಡೆಯಬಹುದು.
ಜೂನ್ 2020 ರಿಂದ ಸಬ್ಸಿಡಿ ಇಲ್ಲ
ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿಯನ್ನು ಎರಡು ವರ್ಷಗಳ ಹಿಂದೆ ನಿಲ್ಲಿಸಲಾಗಿದೆ. 2020 ರಲ್ಲಿ ಕೊರೋನಾ ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ ಸರ್ಕಾರವು ಜೂನ್ ನಿಂದ ಗ್ಯಾಸ್ ಸಿಲಿಂಡರ್ ಗಳ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದೆ. ಜೂನ್ 2020 ರಿಂದ LPG ಸಬ್ಸಿಡಿ ರೂಪದಲ್ಲಿ ಯಾವುದೇ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿಲ್ಲ. ಆದರೆ, ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ನೀಡಿದವರಿಗೆ ಮಾತ್ರ 200 ರೂ ಸಬ್ಸಿಡಿ ನೀಡಲಾಗುತ್ತಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, LPG ಸಬ್ಸಿಡಿಯನ್ನು ನಿಲ್ಲಿಸುವ ಮೂಲಕ ಸರ್ಕಾರವು 2021-22 ರಲ್ಲಿ 11,654 ಕೋಟಿ ರೂ. ಉಳಿಸಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಉಜ್ವಲಾ ಯೋಜನೆಯಡಿ ಎಲ್.ಪಿ.ಜಿ. ಸಬ್ಸಿಡಿ ರೂಪದಲ್ಲಿ ಸರ್ಕಾರ ಕೇವಲ 242 ಕೋಟಿ ರೂ. ಅನುದಾನ ನೀಡಿದೆ.
FY 2023 ರ ಬಜೆಟ್ ನಲ್ಲಿ LPG ಸಬ್ಸಿಡಿಗಾಗಿ ಕೇಂದ್ರವು 5,800 ಕೋಟಿ ರೂಪಾಯಿ ಒದಗಿಸಿದೆ. ಇದರಲ್ಲಿ ಗೃಹ ಬಳಕೆಗಾಗಿ 4,000 ಕೋಟಿ ರೂ.ಗಳ ನೇರ ಲಾಭ ವರ್ಗಾವಣೆ ಮತ್ತು ಉಜ್ವಲ ಯೋಜನೆಯಡಿ ಬಡವರಿಗೆ 800 ಕೋಟಿ ರೂ. FY23 ರ ಬಜೆಟ್ ಹಂಚಿಕೆ ಅಸಮರ್ಪಕವಾಗಿದೆ ಎಂದು ಹೇಳಲಾಗಿದ್ದು, ಹೆಚ್ಚುವರಿ ಹಂಚಿಕೆ ಅಗತ್ಯವಿದೆ. ಆದರೆ ಇದು 40,000 ಕೋಟಿ ರೂ.ಗಿಂತ ಹೆಚ್ಚಿಲ್ಲದಿರಬಹುದು ಎನ್ನಲಾಗಿದೆ.
ಯಾರು ಸಬ್ಸಿಡಿ ಪಡೆಯುತ್ತಾರೆ?
ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ನೀಡಲಾಗುತ್ತದೆ. ವಾರ್ಷಿಕ ಆದಾಯ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಇರುವವರಿಗೆ ಸಬ್ಸಿಡಿ ನೀಡುವುದಿಲ್ಲ. 10 ಲಕ್ಷದ ಈ ವಾರ್ಷಿಕ ಆದಾಯವನ್ನು ಗಂಡ ಮತ್ತು ಇಬ್ಬರ ಆದಾಯವನ್ನು ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಎಲ್.ಪಿ.ಜಿ. ಸಿಲಿಂಡರ್ ನಲ್ಲಿ ಲಭ್ಯವಿರುವ ಸಬ್ಸಿಡಿಯು ಭಾರತದ ಎಲ್ಲಾ ರಾಜ್ಯಗಳಲ್ಲಿ ವಿಭಿನ್ನವಾಗಿದೆ.
ಎಷ್ಟಿದೆ LPG ಸಿಲಿಂಡರ್ ಬೆಲೆ ?
ದೇಶೀಯ ಎಲ್‌ಪಿಜಿಯ ಪ್ರಸ್ತುತ ಬೆಲೆ 14.2 ಕೆಜಿ ಸಿಲಿಂಡರ್‌ಗೆ 1,053 ರೂ. ಏಪ್ರಿಲ್ 2022 ರಿಂದ 11% ಮತ್ತು ಜೂನ್ 2020 ರಿಂದ 78% ರಷ್ಟು ಬೆಲೆ ಏರಿಕೆಯಾಗಿದೆ.