ನವದೆಹಲಿ: ಜುಲೈ 1 ರ ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ಅಗ್ಗವಾಗಲಿದೆ. ಶುಕ್ರವಾರ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಜುಲೈ 1 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್ಗಳ ದರ 198 ರೂ.ನಷ್ಟು ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ದರ 182 ರೂ., ಮುಂಬೈನಲ್ಲಿ 190.50 ರೂ. ಇಳಿಕೆಯಾಗಿದೆ. ಚೆನ್ನೈನಲ್ಲಿ 187 ರೂ. ಇಳಿಕೆಯಾಗಿದೆ.
ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್ಗಳ ದರ ಕಡಿತವನ್ನು ಮಾಡಿದೆ ಎಂದು ಹೇಳಲಾಗಿದೆ.
ಆದರೆ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗ್ರಾಹಕರು ಹೆಚ್ಚಿನ ಬೆಲೆಯ ಭಾರವನ್ನು ಎದುರಿಸುತ್ತಲೇ ಇದ್ದಾರೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಅಗ್ಗವಾಗಲೀ ದುಬಾರಿಯಾಗಲೀ ಇಲ್ಲ. ಮೇ 19ರ ದರದಲ್ಲೇ ಈಗಲೂ ಲಭ್ಯವಿದೆ.
ಕಳೆದ ತಿಂಗಳು ಜೂನ್ ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 135 ರೂ. ಕಡಿಮೆ ಮಾಡಲಾಗಿತ್ತು, ಆದರೆ ಮೇ ತಿಂಗಳಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗ್ರಾಹಕರು ಎರಡು ಬಾರಿ ಆಘಾತಕ್ಕೊಳಗಾಗಿದ್ದರು. ಮೇ 7 ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್ನ ದರವನ್ನು 50 ರೂ. ಹೆಚ್ಚಿಸಲಾಗಿದೆ. ಮೇ 19 ರಂದು ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯನ್ನು ಸಹ ಹೆಚ್ಚಿಸಲಾಗಿತ್ತು.