ನವದೆಹಲಿ: ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಯನ್ನು ಶನಿವಾರ ಮತ್ತೆ ಹೆಚ್ಚಿಸಿವೆ. 14.2 ಕೆಜಿ ಸಿಲಿಂಡರ್ ದರ 50 ರೂ. ಗಿಂತಲೂ ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್ ದರ 1 ಸಾವಿರ ರೂ. ಗಡಿ ದಾಟಿದೆ.
ಈ ಹಿಂದೆ ಮಾರ್ಚ್ 2022 ರಲ್ಲಿ ರೂ 50 ಹೆಚ್ಚಿಸಲಾಗಿದ್ದು, 956.05 ರೂ. ದರ ಇತ್ತು. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ವಾರ 102 ರೂ. ಹೆಚ್ಚಿಸಲಾಗಿತ್ತು. 19 ಕೆ.ಜಿ. ಸಿಲಿಂಡರ್ ದರ 2253 ರೂ.ಗೆ ತಲುಪಿದೆ.