alex Certify ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬಿಗ್ ಶಾಕ್: ಸಬ್ಸಿಡಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಎಲ್ಪಿಜಿ ಗ್ರಾಹಕರಿಗೆ ಮತ್ತೊಂದು ಬರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬಿಗ್ ಶಾಕ್: ಸಬ್ಸಿಡಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಎಲ್ಪಿಜಿ ಗ್ರಾಹಕರಿಗೆ ಮತ್ತೊಂದು ಬರೆ

ನವದೆಹಲಿ: ಅಡುಗೆ ಅನಿಲ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂಧನ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಅನಿಲ ದರವನ್ನು 25 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆಜಿ ಸಿಲಿಂಡರ್ ದರ ಕೋಲ್ಕತಾದಲ್ಲಿ 886 ರೂಪಾಯಿ ತಲುಪಿದೆ. ಲಖ್ನೋದಲ್ಲಿ 897.50 ರೂ,ಗೆ ತಲುಪಿದೆ.

ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ದರವನ್ನು 25.50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ. 2020 ರ ಏಪ್ರಿಲ್ ನಿಂದ ಎಲ್.ಪಿ.ಜಿ. ಸಬ್ಸಿಡಿ ಕೂಡ ನಿಲ್ಲಿಸಲಾಗಿದೆ. ಸಿಲಿಂಡರ್ ದರ 1 ಸಾವಿರ ರೂ. ಸನಿಹಕ್ಕೆ ಬಂದಿರುವುದು ಜನಸಾಮಾನ್ಯರಿಗಂತೂ ನುಂಗಲಾರದ ತುತ್ತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...