ನವದೆಹಲಿ: ಅಡುಗೆ ಅನಿಲ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಪ್ರತಿ ಯುನಿಟ್ ಗೆ 142. 07 ರೂಪಾಯಿಯಿಂದ 145. 06 ರೂಪಾಯಿ ನಿಗದಿ ಮಾಡುವ ಸಾಧ್ಯತೆ ಇದ್ದು ಇದು ದಶಕದಲ್ಲೇ ಅತಿ ಕಡಿಮೆ ದರ ಎಂದು ಹೇಳಲಾಗಿದೆ.
ನೈಸರ್ಗಿಕ ಅನಿಲದ ಬೆಂಚ್ ಮಾರ್ಕ್ ದರವನ್ನು ಬದಲಾವಣೆ ಮಾಡುವ ಕುರಿತಾಗಿ ಪರಿಶೀಲನೆ ನಡೆಯುತ್ತಿದೆ. ಪ್ರತಿ ಆರು ತಿಂಗಳಿಗೊಮ್ಮೆ ಅನಿಲ ದರ ಪರಿಷ್ಕರಣೆ ಮಾಡಲಿದ್ದು, ಏಪ್ರಿಲ್ ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಅಕ್ಟೋಬರ್ ನಲ್ಲಿ ಮತ್ತೆ ದರ ಪರಿಷ್ಕರಣೆ ನಿಗದಿಯಾಗಲಿದೆ. ಅಡುಗೆ ಅನಿಲ ದರ 1.90 ಡಾಲರ್ ನಿಗದಿಯಾದಲ್ಲಿ ದೇಶದಲ್ಲಿ ಪ್ರತಿ ಸಿಲಿಂಡರ್ ಬೆಲೆ ನೂರಾರು ರೂಪಾಯಿಯಷ್ಟು ಇಳಿಕೆಯಾಗಬಹುದು ಎಂದು ಹೇಳಲಾಗಿದೆ.