ಪ್ರತಿಯೊಬ್ಬರ ಮನೆಯಲ್ಲೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡಲಾಗ್ತಿದೆ. ಸರ್ಕಾರ ಎಲ್‌ಪಿಜಿ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿದೆ. ಇದರ ನಂತರ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 769 ರೂಪಾಯಿಗೆ ಏರಿದೆ. ದುಬಾರಿ ಸಿಲಿಂಡರನ್ನು ನೀವು ಕೇವಲ 69 ರೂಪಾಯಿಗೆ ಖರೀದಿಸುವ ಅವಕಾಶ ನಿಮಗಿದೆ.
ಪೇಟಿಎಂ ಈ ಆಫರ್ ನೀಡ್ತಿದೆ. ಎಲ್.ಪಿ.ಜಿ. ಸಿಲಿಂಡರನ್ನು ಪೇಟಿಎಂ ಮೂಲಕ ಕಾಯ್ದಿರಿಸಿ ನೀವು 700 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮೂಲಕ ನೀವು ಕೇವಲ 69 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದು. ಇದಕ್ಕೆ ನೀವು ಮೊದಲು ಫೋನ್‌ನಲ್ಲಿ ಪೇಟಿಎಂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತ್ರ ಪೇಟಿಎಂ ಅಪ್ಲಿಕೇಷನ್ ಓಪನ್ ಮಾಡಬೇಕು.
ಇದರ ನಂತರ ರೀಚಾರ್ಜ್ ಮಾಡಿ ಬಿಲ್ ಪಾವತಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಬುಕ್ ಎ ಸಿಲಿಂಡರ್ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಅಥವಾ ಇಂಡೇನ್ ಸಿಲಿಂಡರ್ ನೀವು ಇಲ್ಲಿ ಬುಕ್ ಮಾಡಬಹುದು. ಮುಂದಿನ ಹಂತವಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಎಲ್ಪಿಜಿ ಐಡಿ ನಮೂದಿಸಬೇಕು. ಇದರ ನಂತರ ಪಾವತಿ ಆಯ್ಕೆ ಮಾಡಿ ಪಾವತಿ ಮಾಡಬೇಕು. ಅದಕ್ಕಿಂತ ಮೊದಲು ‘FIRSTLPG’ ಪ್ರೋಮೋ ಕೋಡ್ ಬಳಸಬೇಕು.
ಪೇಟಿಎಂನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಆಗುತ್ತಿದ್ದಂತೆ ಕ್ಯಾಶ್ಬ್ಯಾಕ್ ಸಿಗುತ್ತದೆ. ಮೊದಲ ಬಾರಿ ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ ಈ ಅವಕಾಶ ಸಿಗಲಿದೆ. ಫೆಬ್ರವರಿ 28ರವರೆಗೆ ಮಾತ್ರ ಈ ಅವಕಾಶವಿದ್ದು, ಗ್ಯಾಸ್ ಖಾಲಿಯಾಗಿದ್ದರೆ ಇಂದೇ ಪೇಟಿಎಂ ಮೂಲಕ ಬುಕ್ ಮಾಡಿ.