ನವದೆಹಲಿ: ಇಂದಿನಿಂದ ದೇಶೀಯ ಎಲ್.ಪಿ.ಜಿ. ಸಿಲಿಂಡರ್ ಗಳ ಬೆಲೆ 50 ರೂ ಏರಿಕೆ ಮಾಡಲಾಗಿದೆ. ಜುಲೈ 6 ರ ಇಂದಿನಿಂದ ಸಿಲಿಂಡರ್ ಬೆಲೆಯನ್ನು ರೂ. 50 ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್.ಪಿ.ಜಿ. ಸಿಲಿಂಡರ್‌ದರ 1,003 ರಿಂದ 1,053 ರೂ.ಗೆ ಏರಿಕೆಯಾಗಿದೆ.
ಇಂಡೇನ್ 14.2 ಕೆಜಿ ಸಿಲಿಂಡರ್ ಸಬ್ಸಿಡಿ ರಹಿತ ಬೆಲೆಗಳು ಇಂತಿವೆ.
ದೆಹಲಿ – 1,053 ರೂ.
ಮುಂಬೈ – 1,052.50 ರೂ.
ಕೋಲ್ಕತ್ತಾ – 1,079 ರೂ.
ಚೆನ್ನೈ – 1068.50 ರೂ.
ಜುಲೈ 6 ರ ಬುಧವಾರದಿಂದ ದೇಶಾದ್ಯಂತ ಗೃಹಬಳಕೆಯ ಅಡುಗೆ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ದೇಶೀಯ ಮನೆಯಲ್ಲಿ ಬಳಸುವ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಗಳ ಬೆಲೆ 50 ರೂ. ಹೆಚ್ಚಳವಾಗಿದೆ. ದರ ಹೆಚ್ಚಳದ ನಂತರ ದೇಶೀಯ ಎಲ್.ಪಿ.ಜಿ. ಸಿಲಿಂಡರ್ ಗಳ ಬೆಲೆ ದೆಹಲಿಯಲ್ಲಿ 1,053 ರೂ. ಆಗಿದೆ.
ಗೃಹಬಳಕೆಯ 5 ಕೆಜಿ ಸಿಲಿಂಡರ್ ಬೆಲೆಯನ್ನು ಸಹ ಪ್ರತಿ ಸಿಲಿಂಡರ್ ಗೆ 18 ರೂ. ಹೆಚ್ಚಿಸಲಾಗಿದೆ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 8.50 ರೂ. ಇಳಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಗಳ ದರ 834.50 ರೂ.ನಿಂದ 1,003 ರೂ.ಗೆ ಏರಿಕೆಯಾಗಿದೆ. ಗೃಹಬಳಕೆಯ LPG ಸಿಲಿಂಡರ್ ಬೆಲೆಯನ್ನು ಮೇ 19, 2022 ರಂದು ಕೊನೆಯದಾಗಿ 4 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು, ಮೇ 7 ರಂದು ಪ್ರತಿ ಸಿಲಿಂಡರ್‌ಗೆ 949.50 ರೂ.ಗಳಷ್ಟಿತ್ತು. ಮಾರ್ಚ್ 22, 2022 ರಂದು 50 ರೂ. ಏರಿಕೆ ನಂತರ 999.50 ರೂ.ಗೆ ತಲುಪಿತ್ತು.ಮಾರ್ಚ್ 22 ರಂದು ಸಹ ಸಿಲಿಂಡರ್ ಬೆಲೆಯಲ್ಲಿ 50 ರೂ. ಏರಿಕೆಯಾಗಿತ್ತು,