ನವದೆಹಲಿ: ಕಳೆದ 5 ತಿಂಗಳಿನಿಂದ ಬದಲಾವಣೆಯಾಗದೆ ಉಳಿದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಡಿಸೆಂಬರ್ 1 ರಿಂದ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಸಿಲಿಂಡರ್ ದರ ಪರಿಷ್ಕರಿಸಿಲ್ಲ.
ಡಿಸೆಂಬರ್ ನಲ್ಲಿ ಸಿಲಿಂಡರ್ ದರ ಬದಲಾವಣೆಯಾಗಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ಪ್ರಕಾರ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ಬೆಲೆ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಪ್ರತಿ ಸಿಲಿಂಡರ್ ಗೆ 594 ರೂಪಾಯಿ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಪ್ರತಿ ತಿಂಗಳು ಎಲ್ಪಿಜಿ ಬೆಲೆಯನ್ನು ಸರ್ಕಾರಿ ತೈಲಕಂಪನಿಗಳು ಪರಿಷ್ಕರಿಸುತ್ತವೆ. ಡಿಸೆಂಬರ್ ನಲ್ಲಿ ಅಡುಗೆ ಅನಿಲದ ಬೆಲೆ ಬದಲಾಗಲಿದೆ. ಎಲ್ಪಿಜಿ ಬೆಲೆಯನ್ನು ಮತ್ತಷ್ಟು ತಗ್ಗಿಸುವ ಮೂಲಕ ಈ ತಿಂಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಎಲ್ಪಿಜಿ ಬೆಲೆ ಏರಿಕೆಯಾದರೆ ಜನಸಾಮಾನ್ಯರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಜನ ಸಂಕಷ್ಟದಲ್ಲಿದ್ದು, ಎಲ್ಪಿಜಿ ಬೆಲೆಗಳನ್ನು ಹೆಚ್ಚಳ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ.