ನವದೆಹಲಿ: ತೈಲ ಹಾಗೂ ಅನಿಲ ಉತ್ಪಾದನೆ ಹೆಚ್ಚಳಕ್ಕೆ ಕೊಲ್ಲಿ ರಾಷ್ಟ್ರಗಳು ನಿರಾಕರಿಸಿವೆ. ಭಾರತ ಸೇರಿ ಅನೇಕ ದೇಶಗಳು ಉತ್ಪಾದನೆ ಹೆಚ್ಚಿಸುವಂತೆ ಮನವಿ ಮಾಡಿವೆ.
ಆದರೆ, ಕೊಲ್ಲಿ ರಾಷ್ಟ್ರಗಳು ಉತ್ಪಾದನೆ ಹೆಚ್ಚಳಕ್ಕೆ ನಿರಾಕರಿಸಿದ ಪರಿಣಾಮ ಎಲ್ಪಿಜಿ ಸಿಲಿಂಡರ್ ದರ 1 ಸಾವಿರ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇನ್ನಷ್ಟು ದುಬಾರಿಯಾಗಿದೆ ಎಂದು ಹೇಳಲಾಗಿದೆ.
ತೈಲ ಉತ್ಪಾದನೆ ಹೆಚ್ಚಳ ಮಾಡಿ ಪೂರೈಕೆ ಹೆಚ್ಚಳ ಮಾಡುವಂತೆ ಭಾರತ ಸೇರಿದಂತೆ ಹಲವು ದೇಶಗಳು ಮನವಿ ಮಾಡಿದ್ದು, ತೈಲ ಉತ್ಪಾದಕ ದೇಶಗಳ ಒಕ್ಕೂಟ –ಒಪೆಕ್ ಇದನ್ನು ನಿರಾಕರಿಸಿದೆ. ಇದರಿಂದಾಗಿ ಕಚ್ಚಾತೈಲದ ತರ ಒಂದೇ ದಿನ 4 ಡಾಲರ್ ನಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಪೆಟ್ರೋಲ್ 100 ರೂ., ಗ್ಯಾಸ್ ದರ 1000 ರೂಪಾಯಿಗೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ.