ಬೆಂಗಳೂರು: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಸಿಲಿಂಡರ್ ದರವನ್ನು ದುಬಾರಿಯಾಗಿರುವುದರಿಂದ ಬಹುತೇಕರು ಸಿಲಿಂಡರ್ ಖಾಲಿಯಾದರೂ ಖರೀದಿಸುವುದನ್ನು ನಿಲ್ಲಿಸಿದ್ದಾರೆ.
ಪ್ರತಿ ಸಿಲಿಂಡರ್ ದರ 800 ರೂ. ದಾಟಿದ ನಂತರ ಬಿಪಿಎಲ್ ಕುಟುಂಬದವರು ಸಿಲಿಂಡರ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಫಲಾನುಭವಿಗಳು ಕಂಗಾಲಾಗಿದ್ದು, ದುಬಾರಿ ದರ ಪಾವತಿಸಲಾಗದೆ ಸಿಲಿಂಡರ್ ಖರೀದಿ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯಿಂದ 5 ಕೆಜಿ ತೂಕದ ಸಿಲಿಂಡರ್ ವಿತರಿಸುವ ಕುರಿತಂತೆ ಚಿಂತನೆ ನಡೆದಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ರೀತಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಿದ್ದು, ದುಬಾರಿ ದರದ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಕಾರಣಕ್ಕೆ ಅವರಿಗೆ ಅನುಕೂಲವಾಗುವಂತೆ 5 ಕೆಜಿ ಸಿಲಿಂಡರ್ ಗಳನ್ನು ವಿತರಿಸಲು ಚಿಂತನೆ ನಡೆದಿದೆ.
ಯೋಜನೆಯಡಿ ಸಿಲಿಂಡರ್ ಖರೀದಿಸಿದಲ್ಲಿ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ಪಾವತಿಸಲಾಗುತ್ತದೆ. ಸಿಲಿಂಡರ್ ದರ ದುಬಾರಿಯಾಗಿರುವುದರಿಂದ ಬಹುತೇಕರು ಸಿಲಿಂಡರ್ ಖರೀದಿಸುತ್ತಿಲ್ಲ. ಅಂತವರಿಗೆ ಅನುಕೂಲವಾಗುವಂತೆ 5 ಕೆಜಿ ಸಿಲೆಂಡರ್ ವಿತರಿಸುವ ಕುರಿತು ಸಿಲಿಂಡರ್ ಪೂರೈಕೆ ಕಂಪನಿಗಳೊಂದಿಗೆ ಆಹಾರ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.