ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಹಿಂದಿನ ವರ್ಷ 2020ರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿತ್ತು. ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ಒಟಿಪಿ ಜಾರಿಗೆ ತರಲಾಗಿತ್ತು. ಈಗ ಸಿಲಿಂಡರ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಮತ್ತೊಂದು ಬದಲಾವಣೆ ಮಾಡಲಾಗ್ತಿದೆ.
ಸಿಲಿಂಡರ್ ಬುಕ್ಕಿಂಗ್ ಹಾಗೂ ಗ್ರಾಹಕರಿಗೆ ಸುಲಭವಾಗಿ ಸಿಲಿಂಡರ್ ಸಿಗುವಂತೆ ಮಾಡಲು ಸರ್ಕಾರ ಕೆಲಸ ಮಾಡ್ತಿದೆ. ಹೊಸ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದ್ರ ಪ್ರಕಾರ ನೀವು ಬೇರೆ ಕಂಪನಿಗಳಿಂದಲೂ ನಿಮ್ಮ ಸಿಲಿಂಡರ್ ತುಂಬಿಸಿಕೊಳ್ಳಬಹುದು. ಅಂದ್ರೆ ನಿಮ್ಮ ಬಳಿ ಐಒಸಿ ಸಿಲಿಂಡರ್ ಇದ್ದು, ನೀವು ಬಿಪಿಸಿಎಲ್ ನಿಂದಲೂ ಸಿಲಿಂಡರ್ ತುಂಬಿಸಿಕೊಳ್ಳಬಹುದು.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿ ಒಂದು ವಿಶೇಷ ಫ್ಲಾಟ್ಫಾರ್ಮ್ ಸಿದ್ಧಪಡಿಸುತ್ತಿವೆ. ಸರ್ಕಾರ ತೈಲ ಕಂಪನಿಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಿದೆ. ಇಷ್ಟೇ ಅಲ್ಲ 5 ಕೆ.ಜಿ. ಸಿಲಿಂಡರ್ ಪಡೆಯಲು ನೀವು ವಿಳಾಸ ದಾಖಲೆ ನೀಡಬೇಕಾಗಿಲ್ಲ. ಸಣ್ಣ ಸಿಲಿಂಡರ್ ಪ್ರವಾಸಿಗಳಿಗೆ ಲಭ್ಯವಿದೆ. ಇವರಿಗೆ ವಿಳಾಸ ದಾಖಲೆ ನೀಡುವುದು ಸಮಸ್ಯೆಯ ವಿಷ್ಯವಾಗಿತ್ತು. ಆದ್ರೆ ಇನ್ಮುಂದೆ ಅವರ ಕೆಲಸ ಸುಲಭವಾಗಲಿದೆ.