ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿ 3 ತಿಂಗಳು ಸಿಲಿಂಡರ್ ಖರೀದಿಗೆ ಹಣ ನೀಡಲಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳ ಮುಂಗಡ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಅನೇಕ ಫಲಾನುಭವಿಗಳು ಖಾತೆಯಲ್ಲಿನ ಹಣ ಬಳಸದೇ ಇರುವುದರಿಂದ ಜೂನ್ ತಿಂಗಳ ಹಣ ವರ್ಗಾವಣೆಯಲ್ಲಿ ಬದಲಾವಣೆ ಮಾಡಲಾಗಿದೆ.
ಖಾತೆಗೆ ಬಂದ ಹಣ ಬಳಸದ ಗ್ರಾಹಕರು ತಮ್ಮ ಖಾತೆಯಲ್ಲಿ ಉಳಿದ ಹಣದಿಂದ ಸಿಲಿಂಡರ್ ಖರೀದಿಸಬೇಕು. ಜೂನ್ ತಿಂಗಳಿಗೆ ಹಣ ಬಿಡುಗಡೆ ಮಾಡುವುದಿಲ್ಲ. ಜೂನ್ ತಿಂಗಳಲ್ಲಿ ಸ್ವಂತ ಹಣದಲ್ಲಿ ಸಿಲಿಂಡರ್ ಖರೀದಿಸಬೇಕು. ಜುಲೈ ತಿಂಗಳ ಮೊದಲ ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಏಪ್ರಿಲ್ ಮತ್ತು ಜೂನ್ ನಲ್ಲಿ ಖಾತೆಗೆ ಜಮಾ ಆದ ಹಣವನ್ನು ಬಳಸದಿರುವವರು 2021 ರ ಮಾರ್ಚ್ 31 ರವರೆಗೆ ಬಳಸಬಹುದಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಮುಂಗಡ ಹಣವನ್ನು ಈಗಾಗಲೇ ಖಾತೆಗೆ ಜಮಾ ಮಾಡಲಾಗಿದ್ದು ಜೂನ್ ತಿಂಗಳ ಹಣವನ್ನು ಜುಲೈ ಮೊದಲ ವಾರದಲ್ಲಿ ಜಮಾ ಮಾಡಲಾಗುವುದು ಎನ್ನಲಾಗಿದೆ.