ನವದೆಹಲಿ: ಅಡುಗೆ ಅನಿಲ ದರ ಮತ್ತೆ 25 ರೂಪಾಯಿ ಏರಿಕೆಯಾಗಿದೆ. ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರವನ್ನು 25 ರೂಪಾಯಿ ಏರಿಕೆ ಮಾಡಲಾಗಿದ್ದು, 14.2 ಕೆಜಿ ಸಿಲಿಂಡರ್ ಬೆಲೆ 797 ರೂಪಾಯಿಗೆ ಏರಿಕೆಯಾಗಿದೆ.
ಫೆಬ್ರವರಿಯಲ್ಲೇ ಮೂರು ಸಲ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಕಳೆದ ಎರಡು ತಿಂಗಳೊಳಗೆ ಬರೋಬ್ಬರಿ 200 ರೂಪಾಯಿ ಹೆಚ್ಚಳವಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ನವೆಂಬರ್ ನಲ್ಲಿ 597 ರೂಪಾಯಿ ಇದ್ದ ಸಿಲಿಂಡರ್ ದರ ಡಿಸೆಂಬರ್ ನಲ್ಲಿ 100 ರೂ. ಏರಿಕೆಯಾಗಿತ್ತು. ಫೆಬ್ರವರಿಯಲ್ಲಿ ಮೂರು ಸಲ ದರ ಹೆಚ್ಚಳ ಮಾಡಲಾಗಿದ್ದು, 100 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಎರಡು ತಿಂಗಳಲ್ಲಿ 200 ರೂಪಾಯಿ ಏರಿಕೆಯಾಗಿ ಸಿಲಿಂಡರ್ ಗೆ 797 ರೂಪಾಯಿ ಆಗಿದೆ ಎನ್ನಲಾಗಿದೆ.