ನವದೆಹಲಿ: ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಮತ್ತು ವಾಯುಯಾನ ಟರ್ಬೈನ್ ಇಂಧನ(ಎಟಿಎಫ್) ಬೆಲೆಗಳನ್ನು ಕ್ರಮವಾಗಿ 83.50 ರೂ. ಮತ್ತು 6,632.25 ರೂ. ರಷ್ಟು ಕಡಿತಗೊಳಿಸಲಾಗಿದ್ದು, ಜೂನ್ 1 ರಿಂದ ಜಾರಿಗೆ ಬರಲಿದೆ.
19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ದೆಹಲಿಯಲ್ಲಿ 1,773 ರೂಪಾಯಿಯಾಗಿದ್ದು, ಈ ಹಿಂದೆ 1,856.50 ರೂ. ಇತ್ತು. ಮುಂಬೈನಲ್ಲಿ ಈ ಹಿಂದೆ 1808.50 ರೂ.ನಿಂದ ಈಗ 1,725 ರೂ. ದರ ಇದೆ.
ಕಡಿಮೆಯಾದ ಬೆಲೆಗಳು ವಾಣಿಜ್ಯ ಗ್ರಾಹಕರಿಗೆ ಪರಿಹಾರವಾಗಿದ್ದರೂ ಸಹ, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು ಬದಲಾಗದೆ ಉಳಿದಿದೆ. ಇದು ಸತತ ಮೂರನೇ ತಿಂಗಳು ಎಲ್‌ಪಿಜಿ ಬೆಲೆ ಇಳಿಕೆಯಾಗಿದೆ.
ಸ್ಥಳೀಯ ತೆರಿಗೆಗಳಿಂದಾಗಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಗಳು ರಾಜ್ಯಗಳಾದ್ಯಂತ ಬದಲಾಗುತ್ತವೆ.