ಆಧಾರ್ ಕಾರ್ಡ್ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತನ್ನ ಬಳಕೆದಾರರಿಗೆ ಆನ್ಲೈನ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಕೊಡಮಾಡಿದೆ. ಇದೀಗ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಕಳೆದು ಹೋದಲ್ಲಿ ತಮ್ಮ ಇಐಡಿಯನ್ನು ಮರಳಿ ಪಡೆಯಲು ಸಹಾಯವಾಣಿ ಸಂಖ್ಯೆಯೊಂದನ್ನು ಬಿಡುಗಡೆ ಮಾಡಿದೆ.
“ನೀವೇನಾದರೂ ಆಧಾರ್ ಜೊತೆಗೆ ನೋಂದಣಿ ಚೀಟಿಯನ್ನೂ ಕಳೆದುಕೊಂಡಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ನಮ್ಮ ಸಹಾಯವಾಣಿ ಸಂಖ್ಯೆ 1947ಕ್ಕೆ ಕರೆಮಾಡಿ ಅಥವಾ help@uidai.gov.inಗೆ ಭೇಟಿ ಕೊಟ್ಟು, ಅಥವಾ ಆನ್ಲೈನ್ ನಲ್ಲಿ https://resident.uidai.gov.in/lost-uideidಗೆ ಭೇಟಿ ಕೊಟ್ಟು ನೀವು ನಿಮ್ಮ ನೋಂದಣಿ ಐಡಿಯನ್ನು ಮರಳಿ ಪಡೆಯಬಹುದಾಗಿದೆ” ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.
ಭಾರೀ ಜನಾಕ್ರೋಶ ಹಿನ್ನೆಲೆ ಲಾಕ್ ಡೌನ್ ನಿಯಮ ಸಡಿಲಿಕೆ: ಅಗತ್ಯ ವಸ್ತು ತರಲು ವಾಹನ ಬಳಕೆಗೆ ಅವಕಾಶ
https://resident.uidai.gov.in/lost-uideidಗೆ ಭೇಟಿ ಕೊಟ್ಟು, ಅಲ್ಲಿ ಕೇಳುವ ಮಾಹಿತಿಗಳನ್ನು ಒದಗಿಸಿ, ನಿಮ್ಮ ನೋಂದಾಯಿತ ಸಂಖ್ಯೆಗೆ ಬರುವ ಓಟಿಪಿ ಕೋಡ್ ಮೂಲಕ ಖಾತ್ರಿ ಪಡಿಸಿ, 50 ರೂ.ಗಳನ್ನು ಪೇಮೆಂಟ್ ಗೇಟ್‌ವೇ ಮುಖಾಂತರ ಪಾವತಿ ಮಾಡಿದ ಬಳಿಕ ಸ್ಪೀಡ್ ಪೋಸ್ಟ್ ಮೂಲಕ 15 ದಿನಗಳಲ್ಲಿ ನಿಮ್ಮ ಹೊಸ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.