ನಾವೆಲ್ ಕೊರೋನಾ ವೈರಸ್‌ನಿಂದ ಬಳಲುತ್ತಿರುವವ ಸಂಖ್ಯೆಯು ದಿನೇ ದಿನೇ ಏರುತ್ತಲೇ ಇದೆ. ಸದ್ಯದ ಪರಿಸ್ಥಿತಿ ಆತಂಕ ಮೂಡಿಸಿದ್ದು, ಸಾಂಕ್ರಾಮಿಕ ರೋಗದಿಂದ ಪಾರಾಗಲು ಮನುಕುಲ ತನ್ನ ದಿನನಿತ್ಯದ ವೇಳಾಪಟ್ಟಿಗಳಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ತಂದುಕೊಂಡುಬಿಟ್ಟಿದೆ.
ರೆಸ್ಟಾರಂಟ್‌ಗಳು, ದಿನಸಿ ಅಂಗಡಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಸುರಕ್ಷಿತವಾದ ಸೇವೆಗಳನ್ನು ಒದಗಿಸಲು ಬಹಳಷ್ಟು ಮುಂಜಾಗ್ರತೆಯನ್ನು ವಹಿಸಿಕೊಳ್ಳಲಾಗುತ್ತಿದೆ.
ಲಾಸ್ ಏಂಜಲೀಸ್‌ನ ’ದದಿ ಲೇಡಿ ಬರ್ಡ್ ಕೆಫೆ’ ಈ ನಿಟ್ಟಿನಲ್ಲಿ ವಿನೂತನ ಕ್ರಮವೊಂದನ್ನು ತೆಗೆದುಕೊಂಡಿದೆ. ತನ್ನ ಗ್ರಾಹಕರಿಗೆ ಸುರಕ್ಷಿತವಾಗಿ ತಿಂದುಂಡು ಹೋಗಲೆಂದು ಗ್ರೀನ್ ಹೌಸ್ ರೀತಿಯ ಡೈನಿಂಗ್ ಪಾಡ್ ಗಳನ್ನು ಈ ಕೆಫೆಯ ಆಯೋಜಕರು ಒದಗಿಸಿದ್ದಾರೆ. ಈ ಪಾಡ್ ಗಳನ್ನು ಆಗಾಗ್ಗೆ ಕ್ಲೀನ್ ಮಾಡಿ, ಸ್ಯಾನಿಟೈಜ್ ಮಾಡಲಾಗುತ್ತಿದೆ.