ನೌಕರರ ಭವಿಷ್ಯ ನಿಧಿಯ ನಿಮ್ಮ ಖಾತೆಯಿಂದ ನೀವೇನಾದರೂ ತುರ್ತು ಖರ್ಚಿಗೆಂದು ಹಣ ಹಿಂಪಡೆಯಲು ನೋಡುತ್ತಿದ್ದರೆ ಇಪಿಎಫ್ ಫಾರಂ 31 ನಿಮ್ಮ ನೆರವಿಗೆ ಬರಬಲ್ಲದು.
ಮನೆ ಖರೀದಿ, ಗೃಹ ಸಾಲ ಮರುಪಾವತಿ, ವೈದ್ಯಕೀಯ ತುರ್ತು, ನಿಮ್ಮ ಅಥವಾ ನಿಮ್ಮ ರಕ್ತಸಂಬಂಧದ ಮದುವೆ ಅಥವಾ ಮಕ್ಕಳ/ಸಹೋದರರ ಶಿಕ್ಷಣದ ಉದ್ದೇಶಕ್ಕೆ ತುರ್ತು ದುಡ್ಡು ಬೇಕಾದಲ್ಲಿ ನಿಮ್ಮ ಇಪಿಎಫ್ ಖಾತೆಯಡಿ ಮುಂಗಡ ಮೊತ್ತವೊಂದನ್ನು ಹಿಂಪಡೆಯಬಹುದಾಗಿದೆ.
ಇಪಿಎಫ್ ಫಾರಂ 31ನ್ನು ನೀವು ಆನ್ಲೈನ್ ಹಾಗೂ ಆಫ್ಲೈನ್ ಎರಡೂ ಥರ ಭರ್ತಿ ಮಾಡಬಹುದಾಗಿದೆ. ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ನಲ್ಲಿ ವಿವರ ಲಗತ್ತಿಸಲು ಮುಂದಾದರೆ ನಿಮ್ಮ ವಿವರಗಳು ಸ್ವಯಂಚಾಲನೆಯಿಂದ ಭರ್ತಿಯಾಗುತ್ತವೆ. ಆದರೆ ಫಾರಂ 31ರ ಮೂಲಕ ಹಣ ಹಿಂಪಡೆಯಲು ನೀವು ಕೆಲವೊಂದು ಮಾನದಂಡಗಳನ್ನು ಪೂರೈಸಬೇಕು.
‘ಜನ್ ಧನ್’ ಸೇರಿ ‘ಶೂನ್ಯ’ ಬ್ಯಾಲೆನ್ಸ್ ಖಾತೆ ಗ್ರಾಹಕರಿಗೆ ಗುಡ್ ನ್ಯೂಸ್: ವಹಿವಾಟು ಶುಲ್ಕದ ಬಗ್ಗೆ SBI ಸ್ಪಷ್ಟನೆ
ಆ ಪ್ರಕ್ರಿಯೆಯ ಹಂತಗಳು ಹೀಗಿವೆ
* ನೀವು ಫಾರಂ ಅನ್ನು ಇಪಿಎಫ್ಓ ಪೋರ್ಟಲ್ – https://unifiedportal-emp.epfindia.gov.in/epfo/ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೂ ನಿಮ್ಮ ಯುಎಎನ್ ಸಂಖ್ಯೆ ಮೂಲಕ ಲಾಗಿನ್ ಸಹ ಆಗಬಹುದು.
* ಈಗ ಆನ್ಲೈನ್ ಸರ್ವೀಸಸ್ ವಿಭಾಗದಲ್ಲಿ ’ಕ್ಲೇಮ್’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಹೊಸ ಪೇಜ್ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಎಂಟರ್ ಮಾಡಿ, ಬಳಿಕ ’‘Process for Online Claim’ ಕ್ಲಿಕ್ ಮಾಡಿ.
* ಇದಾದ ಬಳಿಕ, ನೀವು ಮುಂದಿನ ಪೇಜ್ನಲ್ಲಿ ಡ್ರಾಪ್ಡೌನ್ ಮೆನುವಿನಿಂದ ‘PF Advance (Form 31)’ ಕ್ಲಿಕ್ ಮಾಡಿ. ಈಗ ನಿಮಗೆ ಮುಂಗಡ ಹಣ ಏಕೆ ಬೇಕೆಂದು ಕಾರಣ ನಮೂದಿಸಿ ನಿಮಗೆ ಎಷ್ಟು ಮೊತ್ತ ಬೇಕೆಂದು ಎಂಟರ್ ಮಾಡಿ, ನಿಮ್ಮ ಸದರಿ ವಿಳಾಸದ ವಿವರ ಎಂಟರ್ ಮಾಡಿ.
* ಈಗ ನೀವು ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಒಟಿಪಿ ಮುಖಾಂತರ ಖಾತ್ರಿ ಪಡಿಸಿ, ‘Validate OTP and Submit Claim Form’ ಮೇಲೆ ಕ್ಲಿಕ್ ಮಾಡಿ.
* ಫಾರಂ ಡೌನ್ಲೋಡ್ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ಮುಂಗಡ ಬೇಕಾದ ಉದ್ದೇಶ, ಬೇಕಾದ ಮೊತ್ತ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ.
* ಇದರೊಂದಿಗೆ, ನಿಮ್ಮ ಉದ್ಯೋಗದಾತರು ಫಾರಂನಲ್ಲಿ ಪ್ರಮಾಣೀಕರಣ, ದಿನಾಂಕ ಹಾಗೂ ಕಂಪನಿಯಲ್ಲಿ ನಿಮ್ಮ ಹುದ್ದ ಸೇರಿದಂತೆ ಕೆಲವೊಂದು ವಿವರಗಳನ್ನು ಭರ್ತಿ ಮಾಡಬೇಕು.
ಮುಂಗಡ ಹಣ ತೆಗೆದುಕೊಳ್ಳುವ ಉದ್ದೇಶದ ಆಧಾರದ ಮೇಲೆ ದಾಖಲೆಗಳನ್ನು ಒದಗಿಸಬೇಕು. ಉದಾಹರಣೆಗೆ, ಮನೆ ಖರೀದಿ ಮಾಡುತ್ತಿದ್ದಲ್ಲಿ, ನೀವು ನಿಮ್ಮ ಆಸ್ತಿಯ ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕು. ವೈದ್ಯಕೀಯ ತುರ್ತಿಗೆ ದುಡ್ಡು ಬೇಕಾದಲ್ಲಿ ನಿಮ್ಮ ವೈದ್ಯಕೀಯ ವರದಿಗಳನ್ನು ಭರ್ತಿ ಮಾಡಬೇಕು.