ಒಳ್ಳೆಯ ರಿಟರ್ನ್ಸ್ ಕೊಡುವಂಥ ಅನೇಕ ಸರ್ಕಾರಿ ಸ್ಕೀಂಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಉಳಿತಾಯ ಸ್ಕೀಂಗಳ ಮೂಲಕ ಕೊಡುವ ಬಡ್ಡಿ ದರದಲ್ಲಿ ಕಡಿತ ಮಾಡದೇ ಇರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿರುವ ಕಾರಣ ಈ ಬಗ್ಗೆ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿದೆ.
ಸದ್ಯದ ಮಟ್ಟಿಗೆ: ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (ಎಸ್‌ಸಿಎಸ್‌ಎಸ್), ಸಾರ್ವಜನಿಕ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳು ಭಾರತ ಸರ್ಕಾರ ನಡೆಸುತ್ತಿರುವ ಅಗ್ರ ಮೂರು ಉಳಿತಾಯ ಸ್ಕೀಂಗಳಾಗಿವೆ.
ಸುಕನ್ಯಾ ಸಮೃದ್ಧಿ ಯೋಜನೆ
ಈ ಯೋಜನೆಯಡಿ ಕನಿಷ್ಠ 250 ರೂ.ಗಳಿಂದ ಹಿಡಿದು, 150 ರ ಗುಣಕಗಳಲ್ಲಿ ವಾರ್ಷಿಕ 1,50,000 ರೂ.ಗಳವರೆಗೆ ಹೂಡಿಕೆ ಮಾಡಬಹುದಾಗಿದೆ. 21 ವರ್ಷಗಳ ಮಟ್ಟಿಗೆ ಹೂಡಿಕೆ ಮಾಡಬಹುದಾಗಿದ್ದು, ಖಾತೆ ತೆರೆದ ದಿನಾಂಕದಿಂದ 15 ವರ್ಷಗಳ ಮಟ್ಟಿಗೆ ಹೂಡಿಕೆಗಳನ್ನು ಮಾಡಬಹುದಾಗಿದೆ.
ವೇತನ ಹೆಚ್ಚಳ ಭರವಸೆ, ಮುಷ್ಕರ ಕೈಬಿಡಲು ಸಾರಿಗೆ ನೌಕರರಿಗೆ ಮನವಿ
ಹಿರಿಯ ನಾಗರಿಕ ಉಳಿತಾಯ ಯೋಜನೆ
ಹಿರಿಯ ನಾಗರಿಕರ ಉಳಿತಾಯ ಸ್ಕೀಂ ಮೂಲಕ ನಿವೃತ್ತ ನೌಕರರಿಗೆ ಉಳಿತಾಯದ ಅವಕಾಶಗಳಿವೆ. ಈ ಯೋಜನೆಗೆ ಸೇರಲು ಬಯಸುವವರಿಗೆ 60 ವರ್ಷ ವಯಸ್ಸಾಗಿರಬೇಕು, ಅಥವಾ ವಿಆರ್‌ಎಸ್ ಪಡೆದಿರಬೇಕು. 1000 ರೂ.ಗಳ ಕನಿಷ್ಠ ಹೂಡಿಕೆಯಿಂದ 15 ಲಕ್ಷ ರೂ.ಗಳ ಗರಿಷ್ಠ ಮೊತ್ತದವರೆಗೆ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಈ ಅವಧಿಯನ್ನು ಮೂರು ವರ್ಷಗಳ ಮಟ್ಟಿಗೆ ವಿಸ್ತರಿಸಬಹುದಾಗಿದೆ.
ಪಿಪಿಎಫ್
ಕನಿಷ್ಠ 500 ರೂ.ಗಳ ಹೂಡಿಕೆಯಿಂದ ಪಿಪಿಎಫ್ ಖಾತೆ ತೆರೆಯಬಹುದಾಗಿದ್ದು, ಗರಿಷ್ಠ 1.5 ಲಕ್ಷ ರೂ.ಗಳವರೆಗೂ 15 ವರ್ಷಗಳ ಮೆಚ್ಯೂರಿಟಿ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಈ ಅವಧಿಯನ್ನು ಇನ್ನೂ ಐದು ವರ್ಷಗಳ ಮಟ್ಟಿಗೆ ವಿಸ್ತರಿಸಬಹುದಾಗಿದೆ. ಈ ಉಳಿತಾಯದ ಮೇಲೆ 7.1%ರ ವರೆಗೆ ಬಡ್ಡಿ ದರ ಕೊಡಲಾಗುವುದು.