ಕೊರೊನಾ ವೈರಸ್ ಆರಂಭಿಕ ದಿನಗಳಲ್ಲಿ ಸರ್ಕಾರ ಕೈಗೊಂಡ ಮಹತ್ವದ ಕ್ರಮಗಳು ಅದರಲ್ಲೂ ಮುಖ್ಯವಾಗಿ ಲಾಕ್ಡೌನ್ ನಿರ್ಧಾರದಿಂದಾಗಿ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ಉಳಿಸಿದೆ.
ಮಾತ್ರವಲ್ಲದೇ 37 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗೋದನ್ನ ತಪ್ಪಿಸಿದೆ. ಹಾಗೂ ದೇಶದಲ್ಲಿ ಆರ್ಥಿಕತೆಯ ಪುನಶ್ಚೇತನ ಮಾಡಿದೆ ಎಂದು ಆರ್ಥಿಕತೆ ಸಮೀಕ್ಷೆಯೊಂದು ಹೇಳಿದೆ.
ರೋಡ್ ರೋಮಿಯೋಗಳಿಗೆ ಪೊಲೀಸರಿಂದ ಖಡಕ್ ಸಂದೇಶ ರವಾನೆ
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗೋದನ್ನ ನಿಯಂತ್ರಿಸಿದೆ ಹಾಗೂ ಕೇರಳ ಕೊರೊನಾದಿಂದ ಸಾವಿಗೀಡಾಗುವವರ ಸಂಖ್ಯೆಯನ್ನ ಕಡಿಮೆ ಮಾಡಿದೆ.
ಬಹಳ ವರ್ಷಗಳ ಹಿಂದೆ ಸ್ಪ್ಯಾನಿಶ್ ಜ್ವರದ ಅನುಭವವನ್ನ ಗಮನದಲ್ಲಿ ಇಟ್ಟುಕೊಂಡು, ಸರ್ಕಾರದ ಆರ್ಥಿಕ ತಜ್ಞರು, ಪ್ರಾರಂಭದ ದಿನಗಳಲ್ಲೇ ಅರ್ಥ ವ್ಯವಸ್ಥೆಯನ್ನ ಬಿಗಿ ಮಾಡಿದ್ರೆ, ಅದು ಬಹಳ ಬಲಿಷ್ಟವಾಗಿ ಹಿಂದಿರುಗಲಿದೆ ಎಂದು ಸಲಹೆ ನೀಡಿದ್ದರು.
ʼಕೊರೊನಾʼ ವಿಮೆ ಪಾಲಿಸಿಯಡಿ 1.28 ಕೋಟಿ ಜನರಿಗೆ ಸಿಕ್ಕಿದೆ ರಕ್ಷಣೆ
ಭಾರತದಲ್ಲಿ ಕೊರೊನಾ ಎರಡನೇ ಅಲೆಯಷ್ಟರ ಹೊತ್ತಿಗೆ ಆರ್ಥಿಕತೆ ವಿ ಆಕಾರದಲ್ಲಿ ಸುಧಾರಿಸಿದೆ. ಇಡೀ ವಿಶ್ವವೇ ಕೊರೊನಾದಿಂದಾಗಿ ನಷ್ಟವನ್ನ ಅನುಭವಿಸ್ತಾ ಇದ್ದರೆ, ಭಾರತ ಮಾತ್ರ ಅರ್ಥ ವ್ಯವಸ್ಥೆಯಲ್ಲಿ ವಿ ಆಕಾರದ ಸುಧಾರಣೆ ಕಂಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.