ನವದೆಹಲಿ: ಕೊರೋನಾ ಎರಡನೇ ಅಲೆ ಅಬ್ಬರದ ಕಾರಣ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ವಿಸ್ತರಣೆ ಮಾಡಲಾಗಿದೆ.
ಪ್ರಮುಖ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಉಚಿತ ಸೇವೆ ಮತ್ತು ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಿದೆ. 2021 ರ ಮಾರ್ಚ್ 15 ರಿಂದ ಮೇ 31 ರ ಅವಧಿಯೊಳಗೆ ಉಚಿತ ಸರ್ವಿಸ್, ವಾರಂಟಿ ಮುಗಿಯುವ ವಾಹನಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.
ರೆನಾಲ್ಟ್ ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅದೇ ರೀತಿ ಟಾಟಾ ಮೋಟಾರ್ಸ್ ಏಪ್ರಿಲ್ 1 ರಿಂದ ಮೇ 31 ರೊಳಗೆ ವಾಹನಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ಮುಗಿಯುವುದಿದ್ದರೆ ಜೂನ್ 30ರ ವರೆಗೆ ವಿಸ್ತರಿಸಿದೆ. ಟೊಯೋಟಾ ಕಿರ್ಲೋಸ್ಕರ್ ಕೂಡ ಒಂದು ತಿಂಗಳವರೆಗೆ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದೆ.