alex Certify ಒಂದು ಸಣ್ಣ ನಿರ್ಣಯ ಅನುಷ್ಠಾನಕ್ಕೆ ತರಲು ತಿಂಗಳುಗಳು ಬೇಕಾ ? ಕೇಂದ್ರಕ್ಕೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಸಣ್ಣ ನಿರ್ಣಯ ಅನುಷ್ಠಾನಕ್ಕೆ ತರಲು ತಿಂಗಳುಗಳು ಬೇಕಾ ? ಕೇಂದ್ರಕ್ಕೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಕೋವಿಡ್-19 ಆರ್ಥಿಕ ಮುಗ್ಗಟ್ಟಿನಲ್ಲಿರುವ ಜನತೆಯ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಸದ್ಯದ ಮಟ್ಟಿಗೆ ಮನ್ನಾ ಮಾಡುವ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಆಗಸ್ಟ್‌ ಅಂತ್ಯದವರೆಗೂ ಅನ್ವಯವಾಗುವಂತೆ ಎರಡು ಕೋಟಿ ರೂ.ಗಳವರೆಗಿನ ಸಾಲದ ಮೇಲೆ ಇರುವ ಚಕ್ರ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರವು ಅಕ್ಟೋಬರ್‌ 3ರಂದು ತಿಳಿಸಿತ್ತು. ನವೆಂಬರ್‌ 15ರ ಒಳಗಾಗಿ ಸರ್ಕಾರದ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ತಿಳಿಸಿದ್ದಾರೆ.

“ಇಂಥ ಒಂದು ಸಣ್ಣ ನಿರ್ಣಯವನ್ನು ಅನುಷ್ಠಾನಕ್ಕೆ ತರಲು ಏಕಿಷ್ಟು ವಿಳಂಬ? ಎರಡು ಕೋಟಿ ರೂ.ಗಳವರೆಗೆ ಸಾಲ ಪಡೆದವರಿಗೆ ಸರ್ಕಾರ ಕೊಡಮಾಡಲು ಬಯಸಿರುವ ಲಾಭವನ್ನು ಸಾಧ್ಯವಾದಷ್ಟು ಬೇಗ ತಲುಪಿಸಬೇಕು” ಎಂದು ನ್ಯಾಯಾಧೀಶರಾದ ಅಶೋಕ್ ಭೂಷಣ್, ಸುಭಾಷ್‌ ರೆಡ್ಡಿ ಹಾಗೂ ಎಂ.ಆರ್‌. ಶಾ ಇದ್ದ ತ್ರಿಸದಸ್ಯ ಪೀಠವು ಸರ್ಕಾರಕ್ಕೆ ತಿಳಿಸಿದೆ.

ಕೋವಿಡ್-19 ಲಾಕ್‌ಡೌನ್ ಕಾರಣದಿಂದ, ಸಾಲ ಮರುಪಾವತಿ ಕಂತುಗಳನ್ನು ಮೂರು ತಿಂಗಳ ಮಟ್ಟಿಗೆ ನಿಧಾನವಾಗಿ ಪಾವತಿ ಮಾಡಬಹುದಾದ ಅವಕಾಶವೊಂದನ್ನು ರಿಸರ್ವ್ ಬ್ಯಾಂಕ್ ಇದೇ ಮಾರ್ಚ್‌ನಲ್ಲಿ ಘೋಷಿಸಿತ್ತು. ಬಳಿಕ ಈ ಅನುಕೂಲವನ್ನು ಆಗಸ್ಟ್‌ 31ರವರೆಗೂ ವಿಸ್ತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಬಳಿಕ ತಿಳಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...