ಎರಡು ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರವನ್ನು ನವೆಂಬರ್ 5 ರ ಒಳಗೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಾಲಗಾರರ ಸಾಲಗಳ ಮೇಲಿನ ಬಡ್ಡಿ ಹಾಗೂ ಚಕ್ರಬಡ್ಡಿಗಳ ವ್ಯತ್ಯಾಸವನ್ನು ನವೆಂಬರ್ 5ರ ಒಳಗಾಗಿ ಫಲಾನುಭವಿಗಳ ಖಾತೆಗಳಿಗೆ ಪಾವತಿ ಮಾಡಲಾಗುವುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.
“ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳಿಗೂ ಕೇಂದ್ರ ಸರ್ಕಾರ ನಿರ್ದೇಶನ ಮಾಡಿದ್ದು, ಸ್ಕೀಂ ಅನ್ವಯ ಲೆಕ್ಕಾಚಾರ ಮಾಡಲಾಗುವ ಮೊತ್ತವನ್ನು ಸಾಲಗಾರರ ಖಾತೆಗಳಿಗೆ ನವೆಂಬರ್ 5ರ ಒಳಗಾಗಿ ಜಮೆ ಮಾಡಲು ಸೂಚಿಸಲಾಗಿದೆ” ಎಂದು ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ವಿತ್ತ ಮಂತ್ರಾಲಯ ತಿಳಿಸಿದೆ.
ಕೋವಿಡ್-19 ಕಾರಣದಿಂದಾಗಿ ಮಾರ್ಚ್ 1 -ಆಗಸ್ಟ್ 31ರ ನಡುವಿನ ಆರು ತಿಂಗಳ ಅವಧಿಗೆ ಸಾಲಗಳ ಮೇಲಿನ ಬಡ್ಡಿಯ ಮಾಸಿಕ ಕಂತುಗಳ ಪಾವತಿಗೆ ಮಾಡಲು ಹೆಚ್ಚಿನ ಕಾಲಾವಧಿಯನ್ನು ಸಾಲಗಾರರಿಗೆ ಕೊಡಲಾಗಿತ್ತು. ಇದರ ಜೊತೆಗೆ ಚಕ್ರ ಬಡ್ಡಿ ಮನ್ನಾ ಮಾಡುವ ಯೋಜನೆಯನ್ನೂ ಸಹ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.